ಕುಶಾಲನಗರ, ಆ. 30: ಬಿಜೆಪಿ ಮುಖಂಡ ಬಿ.ವೈ. ವಿಜಯೇಂದ್ರ ಕುಶಾಲನಗರಕ್ಕೆ ಭೇಟಿ ನೀಡಿ ಪ್ರವಾಹ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಸ್ಥಳೀಯ ಬಡಾವಣೆ ಗಳಿಗೆ ಭೇಟಿ ನೀಡಿದ್ದ ಅವರು, ಪ್ರವಾಹದ ವೇಳೆ ಹಾನಿಗೊಳಗಾದ ಮನೆಯ ಸಂತ್ರಸ್ತರಿಗೆ ಧೈರ್ಯ ತುಂಬಿದರು.

ಮೈಸೂರು ಜಿಲ್ಲೆ ಬಿಜೆಪಿ ಅಧ್ಯಕ್ಷ ಅಶೋಕ್, ಪಕ್ಷದ ಮುಖಂಡರಾದ ರಾಜೇಂದ್ರ, ಡಿ.ಕೆ. ತಿಮ್ಮಪ್ಪ, ಎನ್.ಎಂ. ಶಂಭುಲಿಂಗಪ್ಪ, ಎಂ.ಎಸ್. ಶಿವಾನಂದ, ಪ.ಪಂ. ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಇದ್ದರು.