ಕೂಡಿಗೆ, ಆ. 30: ಕೂಡಿಗೆಯ ಸ್ತ್ರೀಶಕ್ತಿ ವೃದ್ಧಾಶ್ರಮದಲ್ಲಿ ಕುಶಾಲನಗರದ ಕೇರಳ ಸಮಾಜದ ವತಿಯಿಂದ ಅನ್ನಸಂತರ್ಪಣೆ ಕಾರ್ಯ ನಡೆಯಿತು. ಕೊಡಗಿನಲ್ಲಿ ಮಳೆಯಿಂದ ಸಂಕಷ್ಟ ಎದುರಾಗಿರುವ ಹಿನ್ನೆಲೆ ಕುಶಾಲನಗರದ ಕೇರಳ ಸಮಾಜದ ವತಿಯಿಂದ ಅದ್ದೂರಿಯಾಗಿ ಆಚರಿಸುತ್ತಿದ್ದ ಓಣಂ ಹಬ್ಬವನ್ನು ರದ್ದುಗೊಳಿಸಲಾಗಿದೆ. ಹಬ್ಬ ಆಚರಿಸುವ ಬದಲು ಹಬ್ಬದ ಅಂಗವಾಗಿ ಕೂಡಿಗೆಯ ಸ್ತ್ರೀಶಕ್ತಿ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಎಂದು ಕೇರಳ ಸಮಾಜದ ಅಧ್ಯಕ್ಷ ಶಿವಾನಂದನ್ ತಿಳಿಸಿದರು.

ಈ ಸಂದರ್ಭ ಸಮಾಜದ ಖಜಾಂಚಿ ಆನಂದನ್, ಗೌರವ ಕಾರ್ಯದರ್ಶಿಗಳಾದ ವೇಣು ಮತ್ತು ಸಮಿತಿ ಸದಸ್ಯರಾದ ಬಾಲಕೃಷ್ಣನ್, ಶಶಿಧರ್, ರಾಬಿನ್ ಮತ್ತು ಗೋಪಾಲಕೃಷ್ಣ ಇದ್ದರು.