ತಿರುವನಂತಪುರಂ, ಆ. 30: ಇತ್ತೀಚಿನ ಪ್ರವಾಹದಿಂದಾಗಿ ಪಂಪಾ ನದಿ ಬಳಿ ತೀವ್ರ ಹಾನಿ ಹಿನ್ನೆಲೆ ಶಬರಿಮಲೆಗೆ ಭೇಟಿ ನೀಡುವ ಭಕ್ತಾದಿಗಳಿಗೆ ಆನ್‍ಲೈನ್ ಬುಕ್ಕಿಂಗ್ ಕಡ್ಡಾಯ ಮಾಡುವಂತೆ ಹಾಗೂ ತೀರ್ಥಯಾತ್ರೆ ವಿಂಡೋ ಮೂಲಕ ನವೆಂಬರ್ ವೇಳೆಯಲ್ಲಿನ ಭಕ್ತಾದಿಗಳ ದಟ್ಟಣೆ ನಿಯಂತ್ರಿಸಲು ಮುಂದಾಗುವಂತೆ ಪೆÇಲೀಸರು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ. ಪ್ರವಾಹದಿಂದಾಗಿ ಹಾನಿಗೊಂಡಿರುವ ಶಬರಿಮಲೆಯಲ್ಲಿ ಮೂಲ ಸೌಕರ್ಯಗಳನ್ನು ಪುನರ್ ನಿರ್ಮಿಸುವ ಸಂಬಂಧ ಮುಖ್ಯಮಂತ್ರಿ ವಿಜಯ್ ಪಿಣರಾಯ್ ನೇತೃತ್ವದಲ್ಲಿ ನಡೆದ ಸಭೆಯ ವೇಳೆಯಲ್ಲಿ ಕೇರಳ ರಾಜ್ಯ ಪೆÇಲೀಸ್ ಮುಖ್ಯಸ್ಥ ಲೊಕನಾಥ್ ಬೆಹೆರಾ ಈ ರೀತಿಯಲ್ಲಿ ಮನವಿ ಮಾಡಿದ್ದಾರೆ. ಪೆÇಲೀಸ್ ಇಲಾಖೆಯ ಮಾಹಿತಿ ತಂತ್ರಜ್ಞಾನ ಇಲಾಖೆ ರೂಪಿಸಿರುವ ಸಾಪ್ಟ್‍ವೇರ್‍ನಿಂದ ಪ್ರತಿದಿನ 80 ಸಾವಿರ ಭಕ್ತಾದಿಗಳನ್ನು ಮಾತ್ರ ಅಯ್ಯಪ್ಪನ ದರ್ಶನಕ್ಕೆ ಮಿತಿಗೊಳಿಸುವ ಸಂಬಂಧ ಸರ್ಕಾರಕ್ಕೆ ಮನವಿ ಮಾಡಿರುವದಾಗಿ ಅವರು ತಿಳಿಸಿದ್ದಾರೆ.

ಕೇರಳದಲ್ಲಿ ಸಾವಿನ ಸಂಖ್ಯೆ 483

ತಿರುವನಂತಪುರಂ, ಆ. 30: ಮಹಾಮಳೆಯಿಂದ ಜಲಾವೃತವಾಗಿದ್ದ ಕೇರಳದಲ್ಲಿ ಇದುವರೆಗೆ 483 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 15 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ವಿಧಾನಸಭೆಗೆ ತಿಳಿಸಿದ್ದಾರೆ. ಪ್ರವಾಹ ಕುರಿತು ಚರ್ಚಿಸಲು ಕರೆಯಲಾಗಿರುವ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಸಿಎಂ ವಿಜಯನ್ ಅವರು, ಶತಮಾನದ ಅತ್ಯಂತ ಭೀಕರ ಪ್ರವಾಹ ಇದಾಗಿದ್ದು, 14.5 ಲಕ್ಷ ಜನರ ನಿರಾಶ್ರಿತ ಕೇಂದ್ರಗಳಲ್ಲಿದ್ದಾರೆ ಎಂದರು. ಒಟ್ಟು 57 ಸಾವಿರ ಹೆಕ್ಟೆರ್ ಕೃಷಿ ಭೂಮಿಯಲ್ಲಿ ಬೆಳೆ ಹಾನಿಯಾಗಿದೆ. ನಮ್ಮ ರಾಜ್ಯದ ವಾರ್ಷಿಕ ಹಣ ಹೂಡಿಕೆಗಿಂತ ಹೆಚ್ಚು ನಷ್ಟವಾಗಿದೆ ಎಂದರು. ಪ್ರವಾಹದಿಂದಾದ ಹಾನಿಯ ಕುರಿತು ಅಂತಿಮ ಮೌಲ್ಯಮಾಪನದ ನಂತರ ಕೇರಳ ಸರ್ಕಾರ ಕೇಂದ್ರದಿಂದ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿದೆ ಎಂದು ಸಿಎಂ ತಿಳಿಸಿದರು. ಕೇರಳ ಪ್ರವಾಹಕ್ಕೆ ವಿಶ್ವದ ವಿವಧ ಸಂಸ್ಥೆಗಳು ನೆರವು ನೀಡಲು ಮುಂದೆ ಬಂದಿವೆ.

ಗ್ಯಾರಿ ಕಸ್ರ್ಟನ್ ಐಪಿಎಲ್ ಆರ್‍ಸಿ ಕೋಚ್

ಬೆಂಗಳೂರು, ಆ. 30: ಈಗಿನಿಂದಲೇ 2019ರ ಐಪಿಎಲ್ ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಟೀಂ ಇಂಡಿಯಾ ಮಾಜಿ ಕೋಚ್ ಗ್ಯಾರಿ ಕಸ್ರ್ಟನ್ ಅವರನ್ನು ತನ್ನ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಕಳೆದ ಐಪಿಎಲ್ ಸೀಸನ್‍ನಲ್ಲಿ ಆರ್‍ಸಿಬಿ 14 ಪಂದ್ಯಗಳಲ್ಲಿ ಕೇವಲ 6 ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸಿತು. ಹೀಗಾಗಿ ಸಪೆÇೀರ್ಟಿಂಗ್ ಸ್ಟಾಫ್ನಲ್ಲಿ ಚೇಂಜಸ್ ಮಾಡಲು ಹೊರಟಿದ್ದು, ಆರ್‍ಸಿಬಿ ಫ್ರಾಂಚೈಸಿ, ತಂಡದ ಮುಖ್ಯ ಕೋಚ್ ಆಗಿದ್ದ ಡೇನಿಯಲ್ ವೆಟ್ಟೋರಿ ಅವರನ್ನು ಇತ್ತೀಚಿಗೆ ವಜಾಗೊಳಿಸಿತ್ತು. ಇದೀಗ ಅವರ ಸ್ಥಾನಕ್ಕೆ ಗ್ಯಾರಿ ಅವರನ್ನು ನೇಮಕ ಮಾಡಿದೆ. ಈ ಹಿಂದೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಕೋಚ್ ಆಗಿ ಕೆಲಸ ಮಾಡಿದ್ದ ಗ್ಯಾರಿ ಅವರು 2011ರ ವಿಶ್ವಕಪ್ ವೇಳೆ ಭಾರತ ತಂಡಕ್ಕೆ ಮಾರ್ಗದರ್ಶನ ಮಾಡಿದ್ದರು. ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಗ್ಯಾರಿ ಅವರು 2018ರಲ್ಲಿ ಆರ್‍ಸಿಬಿ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದರು. ತಮ್ಮನ್ನು ಮುಖ್ಯ ಕೋಚ್ ಆಗಿ ಆಯ್ಕೆ ಮಾಡಿದ ಆರ್‍ಸಿಬಿ ಫ್ರಾಂಚೈಸಿಗೆ ಧನ್ಯವಾದ ಹೇಳಿದ ಗ್ಯಾರಿ, ಕಳೆದ ಆವೃತ್ತಿಯಲ್ಲಿ ಮುಖ್ಯ ಕೋಚ್ ವೆಟ್ಟೋರಿ ಕೈಕೆಳಗೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು ಮತ್ತು ಆ ಅನುಭವವನ್ನು ಸಂಪೂರ್ಣವಾಗಿ ಆನಂದಿಸಿದ್ದೇನೆ ಎಂದಿದ್ದಾರೆ.