ಗೋಣಿಕೊಪ್ಪ, ಆ. 30: ಭೂಕುಸಿತದಿಂದ ಶಿಕ್ಷಣ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವದಾಗಿ ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಪಿಯು ಕಾಲೇಜು ಪ್ರಕಟಿಸಿದೆ.
ಕೊಡವ ಎಜುಕೇಶನ್ ಸೊಸೈಟಿ ಅಧೀನದಲ್ಲಿ ನಡೆಯುತ್ತಿರುವ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಪಿಯು ವಿಭಾಗದಲ್ಲಿ ಉಚಿತ ಶಿಕ್ಷಣ ನೀಡಲಾಗುವದು, ಕಂಪ್ಯೂಟರ್ ಸೈನ್ಸ್ ಹಾಗೂ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್, ಪಿಯುಸಿಯಲ್ಲಿ ಪಿಸಿಎಂಬಿ, ಪಿಸಿಎಂಸಿ ವಿಜ್ಞಾನದಲ್ಲಿ ಶಿಕ್ಷಣ ಪಡೆಯಲು ಅವಕಾಶವಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ. ಭೂಕುಸಿತದಿಂದ ಶಿಕ್ಷಣ ತೊಂದರೆಯಲ್ಲಿರುವ, ಶಿಕ್ಷಣ ಮುಂದುವರಿಸಲು ಅಗದ ವಿದ್ಯಾರ್ಥಿಗಳು ಸರಿಯಾದ ದಾಖಲಾತಿಯೊಂದಿಗೆ ಕಾಲೇಜು ಪ್ರಾಂಶುಪಾಲ ರನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9611173724, 9448582418 ಸಂಖ್ಯೆಯನ್ನು ಸಂಪರ್ಕಿಸಲು ಪ್ರಕಟಣೆ ಕೋರಿದೆ.