ಚೆಟ್ಟಳ್ಳಿ, ಆ. 30: ಕೂರ್ಗ್ ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ ಯು.ಎ.ಇ. ಇವರ ವತಿಯಿಂದ ದುಬೈ ಮರಳುಗಾಡಿನಲ್ಲಿ ಬಕ್ರೀದ್ ಹಬ್ಬದಂದು ವಾಲಿಬಾಲ್ ಹಾಗೂ ಕ್ರಿಕೆಟ್ ಪಂದ್ಯಾಟ ನಡೆಯಿತು.
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ-ಗಾಳಿಗೆ ತಮ್ಮ ಮನೆಗಳನ್ನು ಕಳೆದುಕೊಂಡು ಪರಿಹಾರ ಕೇಂದ್ರಗಳಲ್ಲಿರುವ ನೆರೆ ಸಂತ್ರಸ್ತರಿಗೆ ಕ್ರೀಡಾಕೂಟದಿಂದ ರೂ. 25,000 ಕ್ಕೂ ಹೆಚ್ಚು ದೇಣಿಗೆ ಸಂಗ್ರಹಿಸಿ ಕೊಡಗು ಸುನ್ನಿ ವೆಲ್ಫೇರ್ ಯು.ಎ.ಇ. ಇವರ ಮೂಲಕ ನೀಡಲಾಯಿತು.
ವಾಲಿಬಾಲ್‍ನಲ್ಲಿ ವೀರಾಜಪೇಟೆ ಗುಂಡಿಕೆರೆ ತಂಡ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನವನ್ನು ಕೊಂಡಂಗೇರಿ ತಂಡ ಪಡೆದುಕೊಂಡಿತು. ಕ್ರೀಡಾಕೂಟದ ಬೆಸ್ಟ್ ಆಲ್‍ರೌಂಡರ್ ಪ್ರಶಸ್ತಿಯನ್ನು ಕೊಡಗಿನ ಯುವ ಪ್ರತಿಭೆ ಸುಹೈಲ್ ಗುಂಡಿಕೆರೆ, ಅತ್ಯುತ್ತಮ ಆಟಗಾರನಾಗಿ ಮುನವ್ವರ್ ಕೊಂಡಂಗೇರಿ, ಬೆಸ್ಟ್ ಪಾಸ್ಸರ್ ಪ್ರಶಸ್ತಿಯನ್ನು ಜಾಬೀರ್ ಕರಿಕೆ ಪಡೆದುಕೊಂಡರು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಸುಮಾರು 14 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದವು. ಪ್ರಥಮ ಸ್ಥಾನವನ್ನು ಮಡಿಕೇರಿಯ ವಾಹಿದ್ ನಾಯಕತ್ವದ ಬ್ಯಾರಿ ವಾರಿಯರ್ಸ್ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಅಝರುದ್ದೀನ್ ನಾಯಕತ್ವದ ಬುಲೆಟ್ ಫ್ರೆಂಡ್ಸ್ ಕೊಂಡಂಗೇರಿ ಪಡೆದುಕೊಂಡಿತು.