ಸೋಮವಾರಪೇಟೆ, ಆ. 30: ತಾಲೂಕಿನ ಕಾಫಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು, ಅವರ ನೆರವಿಗಾಗಿ ಕಾಫಿ ಬೆಳೆಗಾರರ ಸಂಘದ ವತಿಯಿಂದ ಪ್ರಕೃತಿ ವಿಕೋಪ ಹಾನಿ ನಿಧಿ ಖಾತೆ ತೆರೆಯಲಾಗಿದೆ ಎಂದು ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ತಿಳಿಸಿದ್ದಾರೆ.

ಕೊಡಗಿನ ಎಲ್ಲೆಡೆ ಭಾರೀ ಗಾಳಿ-ಮಳೆಗೆ ಭೂ ಕುಸಿತ ಉಂಟಾಗಿದ್ದು, ಸಾಕಷ್ಟು ಹಾನಿ ಸಂಭವಿಸಿದೆ. ಇದರಿಂದಾಗಿ ಕಾಫಿ ತೋಟ, ಮನೆ-ಮಠಗಳನ್ನು ಬೆಳೆಗಾರರು ಕಳೆದುಕೊಂಡಿದ್ದು ನಿರ್ಗತಿಕರಾಗಿದ್ದಾರೆ. ಇಂತಹ ಬೆಳೆಗಾರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಇಲ್ಲಿನ ಕೆನರಾ ಬ್ಯಾಂಕ್‍ನಲ್ಲಿ ಸಂಘದ ವತಿಯಿಂದ (IಈSಅ-ಅಓಖಃ000563- ಂ/ಛಿ ಓಔ-0563101017110) ನಂಬರಿನ ಉಳಿತಾಯ ಖಾತೆ ತೆರೆಯಲಾಗಿದೆ. ದಾನ ಮಾಡಲಿಚ್ಚಿಸುವವರು ಈ ಖಾತೆಗೆ ಹಣವನ್ನು ಜಮೆ ಮಾಡುವಂತೆ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9449890005, 9902156212ನ್ನು ಸಂಪರ್ಕಿಸಲು ಕೋರಲಾಗಿದೆ.