ಮೂರ್ನಾಡು, ಆ. 30: ಮೂರ್ನಾಡು ಕೊಡವ ಸಮಾಜದ ವತಿಯಿಂದ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಕೈಲ್ ಮುಹೂರ್ತ ಹಬ್ಬದ ಕ್ರೀಡಾಕೂಟ ಮತ್ತು ಔತಣಕೂಟವನ್ನು ಈ ಬಾರಿ ಪ್ರಾಕೃತಿಕ ವಿಕೋಪದ ಹಿನ್ನೆಲೆ ರದ್ದು ಪಡಿಸಲಾಗಿದೆ. ಈ ಕ್ರೀಡಾಕೂಟ ಮತ್ತು ಔತಣಕೂಟದಲ್ಲಿ ಆಗುವ ಖರ್ಚನ್ನು ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಲಾಗುವದು ಎಂದು ಕೊಡವ ಸಮಾಜದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.