ಮಡಿಕೇರಿ, ಆ. 30: ಜಿಲ್ಲೆಯಾ ದ್ಯಾಂತ ಭಾರೀ ಮಳೆಯಿಂದಾಗಿ ಹಲವು ಭಾಗಗಳಲ್ಲಿ ತೀವ್ರ ಭೂಕುಸಿತ ಉಂಟಾಗಿದ್ದು, ಹಲವು ಮಂದಿ ಸಂತ್ರಸ್ತರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ಪ್ರಗತಿ ಯಲ್ಲಿದೆ. ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಸಂತ್ರಸ್ತರಿಗೆ ವಿತರಿಸಲು ರಾಜ್ಯ, ಜಿಲ್ಲೆಯ ವಿವಿಧೆಡೆಗಳಿಂದ, ಜನಪ್ರತಿ ನಿಧಿಗಳಿಂದ, ಸಾರ್ವಜನಿಕರಿಂದ, ಸಂಘ-ಸಂಸ್ಥೆಗಳಿಂದ ಸ್ವೀಕೃತ ವಾಗುತ್ತಿರುವ ಪರಿಹಾರ ಸಾಮಗ್ರಿ ಗಳನ್ನು ಜಿಲ್ಲೆಯ ದಾಸ್ತಾನು ಕೇಂದ್ರ ಗಳಾದ ನಗರದ ಜಿಲ್ಲಾಡಳಿತ ಭವನ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಗೋದಾಮು, ಕುಶಾಲನಗರ ಮತ್ತು ಹಳೇ ನ್ಯಾಯಾಲಯ ಕಟ್ಟಡ ಪೊನ್ನಂಪೇಟೆ ಕೇಂದ್ರಗಳಲ್ಲಿ

ಮಡಿಕೇರಿ, ಆ. 30: ಜಿಲ್ಲೆಯಾ ದ್ಯಾಂತ ಭಾರೀ ಮಳೆಯಿಂದಾಗಿ ಹಲವು ಭಾಗಗಳಲ್ಲಿ ತೀವ್ರ ಭೂಕುಸಿತ ಉಂಟಾಗಿದ್ದು, ಹಲವು ಮಂದಿ ಸಂತ್ರಸ್ತರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ಪ್ರಗತಿ ಯಲ್ಲಿದೆ. ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಸಂತ್ರಸ್ತರಿಗೆ ವಿತರಿಸಲು ರಾಜ್ಯ, ಜಿಲ್ಲೆಯ ವಿವಿಧೆಡೆಗಳಿಂದ, ಜನಪ್ರತಿ ನಿಧಿಗಳಿಂದ, ಸಾರ್ವಜನಿಕರಿಂದ, ಸಂಘ-ಸಂಸ್ಥೆಗಳಿಂದ ಸ್ವೀಕೃತ ವಾಗುತ್ತಿರುವ ಪರಿಹಾರ ಸಾಮಗ್ರಿ ಗಳನ್ನು ಜಿಲ್ಲೆಯ ದಾಸ್ತಾನು ಕೇಂದ್ರ ಗಳಾದ ನಗರದ ಜಿಲ್ಲಾಡಳಿತ ಭವನ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಗೋದಾಮು, ಕುಶಾಲನಗರ ಮತ್ತು ಹಳೇ ನ್ಯಾಯಾಲಯ ಕಟ್ಟಡ ಪೊನ್ನಂಪೇಟೆ ಕೇಂದ್ರಗಳಲ್ಲಿ ವಾಹನಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಪ್ರಮುಖ ಅವಶ್ಯವಿರುವ ಸಾಮಗ್ರಿಗಳು: 2,735 ಕೆ.ಜಿ. ಅಕ್ಕಿ, 49 ಕೆ.ಜಿ. ಸಕ್ಕರೆ, 24 ಲೀಟರ್ ಎಣ್ಣೆ, 14 ಕೆ.ಜಿ. ತೊಗರಿ ಬೆಳೆ, 105 ಬಾಕ್ಸ್ ಕುಡಿಯುವ ನೀರಿನ ಬಾಟಲಿ, 21 ಹಾಲಿನ ಬಾಕ್ಸ್, 25 ಬಾಕ್ಸ್ ಬಿಸ್ಕೆಟ್, 299 ಹೊದಿಕೆಗಳು, 239 ಸ್ವೆಟರ್, 314 ಉಡುಗೆ ವಸ್ತುಗಳನ್ನು ಜಿಲ್ಲಾಡಳಿ ತದ ವತಿಯಂದ ಸಂತ್ರಸ್ತರಿಗೆ ಆಗಸ್ಟ್ 26 ರಂದು ವಿತರಣೆ ಮಾಡಲಾಗಿದೆ.

ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ತರ ವಿವರ: ಮಡಿಕೇರಿ ತಾಲೂಕಿನ 18 ಪರಿಹಾರ ಕೇಂದ್ರಗಳಲ್ಲಿ 791 ಕಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 1133 ಗಂಡು, ಮತ್ತು 1216 ಹೆಣ್ಣು ಸೇರಿದಂತೆ ಒಟ್ಟು 2349 ಜನ ಸಂತ್ರಸ್ತರಿದ್ದಾರೆ.

ಸೋಮವಾರಪೇಟೆ ತಾಲೂಕಿನ 7 ಪರಿಹಾರ ಕೇಂದ್ರಗಳಲ್ಲಿ 239 ಕುಟುಂಬಗಳು ಆಶ್ರಯ ಪಡೆಯು ತ್ತಿದ್ದು, ಅವರಲ್ಲಿ 375 ಗಂಡು ಮತ್ತು 433 ಹೆಣ್ಣು ಸೇರಿದಂತೆ ಒಟ್ಟು 808 ಜನ ಸಂತ್ರಸ್ತರಿದ್ದಾರೆ.

ವೀರಾಜಪೇಟೆ ತಾಲೂಕಿನ 1 ಪರಿಹಾರ ಕೇಂದ್ರಗಳಲ್ಲಿ 6 ಕುಟುಂಬಗಳು ಆಶ್ರಯ ಪಡೆಯು ತ್ತಿದ್ದು, ಅವರಲ್ಲಿ 12 ಗಂಡು ಮತ್ತು 14 ಹೆಣ್ಣು ಸೇರಿದಂತೆ ಒಟ್ಟು 26 ಜನ ಸಂತ್ರಸ್ತರಿದ್ದಾರೆ. ಜಿಲ್ಲೆಯಲ್ಲಿರುವ 26 ಪರಿಹಾರ ಕೇಂದ್ರಗಳಲ್ಲಿ ಒಟ್ಟು 1036 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 1520 ಗಂಡು ಮತ್ತು 1663 ಹೆಣ್ಣು ಸೇರಿದಂತೆ ಒಟ್ಟು 3183 ಜನ ಸಂತ್ರಸ್ತರಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ.