ಸೋಮವಾರಪೇಟೆ, ಆ. 30: ಇಲ್ಲಿನ ಬೇಳೂರು ಮಠದ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರ ಆರೋಗ್ಯ ತಪಾಸಣೆಯನ್ನು ಕುಶಾಲನಗರದ ವೈದ್ಯೆ ವೀಣಾ ನಡೆಸಿದರು.

ಮಠದಲ್ಲಿ ಆಶ್ರಯ ಪಡೆದಿರುವ ಸುಮಾರು 20 ಮಂದಿ ಸಂತ್ರಸ್ತರ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಈ ಸಂದರ್ಭ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಬೇಳೂರು ಆಶಾ ಕಾರ್ಯಕರ್ತೆ ಭಾಗೀರಥಿ ಸೇರಿದಂತೆ ಇತರರು ಉಪಸ್ಥಿತರಿದ್ದರು.