ಮಡಿಕೇರಿ, ಆ. 30: ಸೇನಾ ನೇಮಕಾತಿ ಕಚೇರಿ, ಬೆಂಗಳೂರು ವಲಯ ಇವರು ತಾ. 13.10.2018 ರಿಂದ 19.10.2018 ರವರೆಗೆ ಜಿಲ್ಲಾ ಕ್ರೀಡಾ ಮೈದಾನ, ಮಂಡ್ಯದಲ್ಲಿ ಕೆಳಕಂಡ ಹುದ್ದೆಗಳಿಗೆ ಭಾರತೀಯ ಸೇನಾ ನೇಮಕಾತಿಯನ್ನು ನಡೆಸಲಿದ್ದಾರೆ.

ಸಿಪಾಯಿ ಸಾಮಾನ್ಯ ಕರ್ತವ್ಯ ಹುದ್ದೆಗೆ ವಯೋಮಿತಿ 21 ವರ್ಷಗಳು . ವಿದ್ಯಾರ್ಹತೆ: 10ನೇ ತರಗತಿಯಲ್ಲಿ ಕನಿಷ್ಟ ಶೇ. 45 ಅಂಕಗಳೊಂದಿಗೆ ತೇರ್ಗಡೆ. ಕನಿಷ್ಟ ಪ್ರತಿ ವಿಷಯದಲ್ಲಿ ಶೇ. 33 ಅಂಕಗಳು ಹೊಂದಿರಬೇಕು. ಉನ್ನತ ವಿದ್ಯಾರ್ಹತೆಗೆ ಶೇಕಡವಾರು ಷರತ್ತು ಅನ್ವಯಿಸುವದಿಲ್ಲ.

ಸಿಪಾಯಿ ತಾಂತ್ರಿಕ ಹುದ್ದೆಗೆ ವಯೋಮಿತಿ 23 ವರ್ಷಗಳು. ವಿದ್ಯಾರ್ಹತೆ: ಪಿ.ಯು.ಸಿ. (ರಸಾಯನಶಾಸ್ತ, ಭೌತಶಾಸ್ತ್ರ, ಗಣಿತ ಮತ್ತು ಇಂಗ್ಲೀಷ್‍ನಲ್ಲಿ ತೇರ್ಗಡೆ)ಯಲ್ಲಿ ಕನಿಷ್ಟ ಶೇ. 50 ಅಂಕಗಳನ್ನು ಪಡೆದಿರಬೇಕು. ಪ್ರತಿ ವಿಷಯದಲ್ಲಿ ಸರಾಸರಿ ಶೇ. 40 ಅಂಕಗಳನ್ನು ಹೊಂದಿರಬೇಕು.

ಸೈನಿಕ ತಾಂತ್ರಿಕ (ವಾಯುಯಾನ/ಯುದ್ಧ ಸಾಮಗ್ರಿ) ಹುದ್ದೆಗೆ ವಯೋಮಿತಿ 23 ವರ್ಷಗಳು. ವಿದ್ಯಾರ್ಹತೆ: ಪಿ.ಯು.ಸಿ. (ರಸಾಯನಶಾಸ್ತ, ಭೌತಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲೀಷ್‍ನಲ್ಲಿ ತೇರ್ಗಡೆ)ಯಲ್ಲಿ ಕನಿಷ್ಟ ಶೇ. 50 ಅಂಕಗಳನ್ನು ಪಡೆದಿರಬೇಕು. ಪ್ರತಿ ವಿಷಯದಲ್ಲಿ ಸರಾಸರಿ ಶೇ. 40 ಅಂಕಗಳನ್ನು ಹೊಂದಿರಬೇಕು. ಅಥವಾ 3 ವರ್ಷದ ಇಂಜಿನಿಯರಿಂಗ್ ಡಿಪ್ಲೋಮಾ (ಒಇ/ಇಐಇ/ಂU/ಅS/ಇ&amdiv;I)ಹೊಂದಿರಬೇಕು.

ಸೈನಿಕ ನರ್ಸಿಂಗ್ ಸಹಾಯಕ/ ಸಹಾಯಕ ಪಶುವೈದ್ಯ ಹುದ್ದೆಗೆ ವಯೋಮಿತಿ 23 ವರ್ಷಗಳು. ವಿದ್ಯಾರ್ಹತೆ: ಪಿ.ಯು.ಸಿ. (ರಸಾಯನಶಾಸ್ತ, ಭೌತಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲೀಷ್‍ನಲ್ಲಿ ತೇರ್ಗಡೆ)ಯಲ್ಲಿ ಕನಿಷ್ಟ ಶೇ. 50 ಅಂಕಗಳನ್ನು ಪಡೆದಿರಬೇಕು. ಪ್ರತಿ ವಿಷಯದಲ್ಲಿ ಸರಾಸರಿ ಶೇ. 40 ಅಂಕಗಳನ್ನು ಹೊಂದಿರಬೇಕು. ಅಥವಾ ಬಿ.ಎಸ್ಸಿ ಪದವಿ (ಸಸ್ಯಶಾಸ್ತ್ರ/ಪ್ರಾಣಿಶಾಸ್ತ್ರ/ಜೈವಿಕ ವಿಜ್ಞಾನ ಮತ್ತು ಇಂಗ್ಲೀಷ್) ಹೊಂದಿರಬೇಕು.

ಸೈನಿಕ ಟ್ರೇಡ್ಸ್‍ಮೆನ್, ಚೆಫ್, ಮೆಸ್ಸ್ ಕೀಪರ್ ಹುದ್ದೆಗೆ ವಯೋಮಿತಿ 23 ವರ್ಷಗಳು. ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ/ಐ.ಟಿ.ಐ. ತೇರ್ಗಡೆ (ಮೆಸ್ಸ್ ಕೀಪರ್ ಮತ್ತು ಹೌಸ್ ಕೀಪರ್ ಹುದ್ದೆಗಳಿಗೆ 8ನೇ ತರಗತಿ ತೇರ್ಗಡೆ).

ಸೈನಿಕ ಲಿಪಿಕ/ ಉಗ್ರಾಣ ಪಾಲಕ ತಾಂತ್ರಿಕ ಹುದ್ದೆಗೆ ವಯೋಮಿತಿ 23 ವರ್ಷಗಳು. ವಿದ್ಯಾರ್ಹತೆ: ಪಿ.ಯು.ಸಿ.(ಕಲೆ, ವಾಣಿಜ್ಯ ಅಥವಾ ವಿಜ್ಞಾನ)ಯಲ್ಲಿ ಶೇ. 60 ಅಂಕಗಳೊಂದಿಗೆ ತೇರ್ಗಡೆ. ಪ್ರತಿ ವಿಷಯದಲ್ಲಿ ಶೇ. 50 ಅಂಕಗಳು ಹೊಂದಿರಬೇಕು. ಇಂಗ್ಲೀಷ್, ಗಣಿತ ಮತ್ತು ಲೆಕ್ಕಶಾಸ್ತ್ರ ವಿಷಯವನ್ನು ಎಸ್.ಎಸ್.ಎಲ್.ಸಿ. ಅಥವಾ ದ್ವಿತೀಯ ಪಿ.ಯು.ಸಿ.ಯಲ್ಲಿ ಅಭ್ಯಸಿಸಿರಬೇಕು. ಪದವಿದಾರರಿಗೆ ಶೇಕಡವಾರು ಷರತ್ತು ಅನ್ವಯಿಸುವದಿಲ್ಲ.

ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಇಚ್ಛಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಿತಿತಿ.ರಿoiಟಿiಟಿಜiಚಿಟಿಚಿಡಿmಥಿ.ಟಿiಛಿ.iಟಿನ ಮುಖಾಂತರ ದಿನಾಂಕ 28.9.2018 ರವರೆಗೆ ಅರ್ಜಿ ಸಲ್ಲಿಸಲು ಸೂಚಿಸಿದೆ. ಆನ್‍ಲೈನ್ ಮೂಲಕ ನೋಂದಣಿ ಮಾಡಲು ಆಧಾರ್ ಕಾರ್ಡ್ ಮತ್ತು ಇಮೇಲ್ ಐ.ಡಿ. ಕಡ್ಡಾಯವಾಗಿರುತ್ತದೆ. ಆನ್‍ಲೈನಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅಡ್ಮಿಟ್ ಕಾರ್ಡ್‍ನೊಂದಿಗೆ ತಮಗೆ ನಿಗದಿಪಡಿಸಿರುವ ದಿನಾಂಕದಂದು ಬೆಳಿಗ್ಗೆ 4 ಗಂಟೆಗೆ ಅಗತ್ಯ ದಾಖಲಾತಿಗಳೊಂದಿಗೆ ನೇಮಕಾತಿ ರ್ಯಾಲಿ ನಡೆಯುವ ಸ್ಥಳದಲ್ಲಿ ಹಾಜರಿರಬೇಕೆಂದು ಸೂಚಿಸಲಾಗಿದೆ.