ವೀರಾಜಪೇಟೆ, ಆ. 31: ವೀರಾಜಪೇಟೆ ಟೌನ್ ಬ್ಯಾಂಕ್ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕರ್ನಂಡ ರಘು ಸೋಮಯ್ಯ, ಉಪಾಧ್ಯಕ್ಷರಾಗಿ ಕಾಂಡಂಡ ಎಂ. ಚರ್ಮಣ್ಣ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ. ವೀರಾಜಪೇಟೆ ಟೌನ್ ಬ್ಯಾಂಕ್‍ನ ಆಡಳಿತ ಮಂಡಳಿಯ ಅಧ್ಯಕ್ಷರ, ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣಾಧಿಕಾರಿ ಪಳಂಗಪ್ಪ ಚುನಾವಣೆ ನಡೆಸಿದರು.

ಟೌನ್ ಬ್ಯಾಂಕ್‍ನ ನೂತನ ಆಡಳಿತ ಮಂಡಳಿಗೆ ತಾ. 18ರಂದು ನಡೆದ ಚುನಾವಣೆಯಲ್ಲಿ ಕೆ.ಎಂ. ರಘು ಸೋಮಯ್ಯ, ಕೆ.ಎಂ. ಚರ್ಮಣ್ಣ, ಕೆ.ಡಬ್ಲ್ಯು. ಬೋಪಯ್ಯ, ಕೆ.ಬಿ. ಪ್ರತಾಪ್, ಎಂ.ಎನ್. ಪೂಣಚ್ಚ, ಪಿ.ಎಂ. ರಚನ್, ಎಂ.ಪಿ. ಕಾವೇರಪ್ಪ, ಮುತ್ತಮ್ಮ, ಎಸ್.ಪಿ. ಜುಬಿನ, ಐ.ಎಂ. ಕಾವೇರಮ್ಮ, ಎಂ.ಕೆ. ದೇವಯ್ಯ, ಡಿ.ಎಂ. ರಾಜ್‍ಕುಮಾರ್ ಹಾಗೂ ಪಿ.ಕೆ. ಅಬ್ದುಲ್ ರೆಹಮಾನ್ ಅವಿರೋಧವಾಗಿ ಆಯ್ಕೆಗೊಂಡಿದ್ದರು.