ಗೋಣಿಕೊಪ್ಪ ವರದಿ, ಆ. 31: ಆಹಾರ ಉತ್ಪಾದನೆಯಲ್ಲಿ ಕೀಟ ನಾಶಕಗಳ ಬಳಕೆಗೆ ಹೆಚ್ಚು ವೆಚ್ಚವಾಗುವದನ್ನು ಮನಗಂಡು ವಿತರಕರು ಔಷಧಿ ಅನವಶ್ಯಕವಾಗಿ ಬಳಕೆ ಮಾಡುವದನ್ನು ನಿಯಂತ್ರಿಸುವ ಜವಾಬ್ದಾರಿ ಹೊರಬೇಕು ಎಂದು ಶಿವಮೊಗ್ಗ ಕೃಷಿ ಕೀಟನಾಶಕ ವಿಭಾಗದ ಉಪ ನಿರ್ದೇಶಕ ಪಾಂಡು ಹೇಳಿದರು. ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಹೈದರಾಬಾದ್ ರಾಷ್ಟ್ರಿಯ ಕೃಷಿ ವಿಸ್ತರಣೆ ನಿರ್ವಹಣೆ ಸಂಸ್ಥೆ ಸಹಯೋಗದಲ್ಲಿ ಕೃಷಿ ಪರಿಕರ ಮಾರಾಟಗಾರರ ಕೃಷಿ ವಿಸ್ತರಣಾ ಸೇವೆಯ ಡಿಪ್ಲೋಮಾ ಶಿಬಿರದ ಗೋಣಿಕೊಪ್ಪ ವರದಿ, ಆ. 31: ಆಹಾರ ಉತ್ಪಾದನೆಯಲ್ಲಿ ಕೀಟ ನಾಶಕಗಳ ಬಳಕೆಗೆ ಹೆಚ್ಚು ವೆಚ್ಚವಾಗುವದನ್ನು ಮನಗಂಡು ವಿತರಕರು ಔಷಧಿ ಅನವಶ್ಯಕವಾಗಿ ಬಳಕೆ ಮಾಡುವದನ್ನು ನಿಯಂತ್ರಿಸುವ ಜವಾಬ್ದಾರಿ ಹೊರಬೇಕು ಎಂದು ಶಿವಮೊಗ್ಗ ಕೃಷಿ ಕೀಟನಾಶಕ ವಿಭಾಗದ ಉಪ ನಿರ್ದೇಶಕ ಪಾಂಡು ಹೇಳಿದರು. ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಹೈದರಾಬಾದ್ ರಾಷ್ಟ್ರಿಯ ಕೃಷಿ ವಿಸ್ತರಣೆ ನಿರ್ವಹಣೆ ಸಂಸ್ಥೆ ಸಹಯೋಗದಲ್ಲಿ ಕೃಷಿ ಪರಿಕರ ಮಾರಾಟಗಾರರ ಕೃಷಿ ವಿಸ್ತರಣಾ ಸೇವೆಯ ಡಿಪ್ಲೋಮಾ ಶಿಬಿರದ ಕೋಟಿ ರೂ. ನಷ್ಟವಾಗುತ್ತಿದೆ ಎಂದರು. ಇದರ ನಿಯಂತ್ರಣ ವಿತರಕರ ಮೇಲಿದೆ. ಕೀಟನಾಶಕ ಬಳಕೆ ಬಗ್ಗೆ ಸರ್ಕಾರದ ಆಕ್ಟ್‍ನಲ್ಲಿ ತೋರಿಸಲಾಗಿದೆ. ಇದನ್ನು ವಿತರಣೆ ಸಂದರ್ಭ ಪಾಲಿಸುವದು ಅವಶ್ಯ ಎಂದರು. ಆಹಾರ ಉತ್ಪಾದನೆ ಹೆಚ್ಚು ನಷ್ಟ ಎಂಬ ಕಾರಣಕ್ಕೆ ಉತ್ಪಾದನೆ ಕಡಿಮೆಯಾಗುತ್ತಿದೆ. 2030 ರಲ್ಲಿ ಆಹಾರ ಕೊರತೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃಷಿ ಪರಿಕರ ಮಾರಾಟಗಾರರ ಕೃಷಿ ವಿಸ್ತರಣಾ ಸೇವಾ ಕೋರ್ಸ್ ಸಂಯೋಜಕ ಪೆನ್ನಿಬೋಲಿಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿ ಪರಿಕರ ವಿತರಕರಲ್ಲಿ ವಿಸ್ತರಣೆ ವಿಭಾಗದ ಜ್ಞಾನ ಹೆಚ್ಚಿಸುವ ಉದ್ದೇಶದಿಂದ ಸರ್ಕಾರದಿಂದಲೇ ತರಬೇತಿ ನೀಡಿ ಪರೀಕ್ಷೆ ನೀಡಲಾಗು ತ್ತಿದೆ. ಇದರಲ್ಲಿ ಪ್ರಮಾಣಪತ್ರ ಪಡೆದುಕೊಂಡು ವಿತರಣೆಯಲ್ಲಿ ತೊಡಗಿಕೊಳ್ಳಲು ಅವಕಾಶವಿದೆ. ಜ್ಞಾನ ಹೆಚ್ಚಿಸಿಕೊಂಡು ಕೃಷಿಗೆ ಉತ್ತೇಜನ ನೀಡಬೇಕಾಗಿದೆ ಎಂದರು. ಜಿಲ್ಲೆಯ ವಿವಿಧ ಭಾಗಗಳಿಂದ ಕೃಷಿ ಪರಿಕರ ಮಾರಾಟಗಾರರ ಕೃಷಿ ವಿಸ್ತರಣಾ ಸೇವೆಯ ವಿತರಕರು ಪಾಲ್ಗೊಂಡಿದ್ದರು. ಈ ಸಂದರ್ಭ ಕೆವಿಕೆ ಮುಖ್ಯಸ್ಥ ಸಾಜುಜಾರ್ಜ್, ವಿಜ್ಞಾನಿಗಳಾದ ವೀರೇಂದ್ರಕುಮಾರ್, ಡಾ. ಪ್ರಬಾಕರ್, ಡಾ. ದೇವಯ್ಯ ಉಪಸ್ಥಿತರಿದ್ದರು.