ಸೋಮವಾರಪೇಟೆ, ಆ. 31: ಚೌಡ್ಲು ಗ್ರಾ.ಪಂ. ವ್ಯಾಪ್ತಿಯ ಗಾಂಧಿನಗರದ ನಿವಾಸಿಗಳಿಗೆ ಅಗತ್ಯ ಪಡಿತರ ವಿತರಿಸಲು ಕ್ರಮಕ್ಕೆ ಆಗ್ರಹಿಸಿ ಪಂಚಾಯಿತಿಗೆ ತೆರಳಿದ ಸಂದರ್ಭ, ಪಂಚಾಯಿತಿ ಸಿಬ್ಬಂದಿ ಜಾತಿ ನಿಂದನೆ ಮಾಡಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಲಾಗಿದೆ.

ಪ್ರಕೃತಿ ವಿಕೋಪದಿಂದಾಗಿ ಕೂಲಿಕಾರ್ಮಿಕರ ಸ್ಥಿತಿ ಬಿಗಡಾಯಿಸಿರುವ ಹಿನ್ನೆಲೆ ಗ್ರಾಮಸ್ಥರಿಗೆ ಪಡಿತರ ವಿತರಿಸಲು ಕ್ರಮಕೈಗೊಳ್ಳಬೇಕೆಂಬ ಮನವಿಯನ್ನು ಗ್ರಾ.ಪಂ.ಗೆ ಸಲ್ಲಿಸಲು ತೆರಳಿದ ಸಂದರ್ಭ ಪಂಚಾಯಿತಿ ಸಿಬ್ಬಂದಿ ಆಶಾ ಎಂಬವರು ಜಾತಿ ನಿಂದನೆ ಮಾಡಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗಾಂಧಿನಗರದ ನಿವಾಸಿ ಹೆಚ್.ಎಂ. ದುರ್ಗೇಶ್ ಅವರು ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದಾರೆ.