ಕುಶಾಲನಗರ, ಆ. 31: ಕುಶಾಲನಗರದಲ್ಲಿ ನೆರೆ ಹಾವಳಿಯಿಂದ ನೀರು ನುಗ್ಗಿದ್ದ ಮನೆಗಳನ್ನು ಮಂಗಳವಾರ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದರು. ಪಟ್ಟಣದ ಬಸಪ್ಪ, ಇಂದಿರಾ ಬಡಾವಣೆಯಲ್ಲಿ ತಗ್ಗು ಪ್ರದೇಶದಲ್ಲಿ ನೆರೆ ಹಾವಳಿಯಿಂದ ಹಾನಿಯಾಗಿದ್ದ ಮನೆ ಮನೆಗೆ ತೆರಳಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕೊಡಗು ಜಿಲ್ಲಾ ಸಮಿತಿ, ಹಾಗೂ ಕುಶಾಲನಗರ ಸರ್ಕಾರಿ ಪಿಯೂ ಕಾಲೇಜಿನ ಪ್ರೌಢಶಾಲಾ ವಿಭಾಗದ ಸ್ಟುಡೆಂಟ್ ಪೊಲೀಸ್ ಕೆಡೆಟ್ ತಂಡದ ಸ್ವಯಂಸೇವಕರು ಮಳೆ ನೀರಿನಿಂದ ಹಾನಿಯಾಗಿದ್ದ ಮನೆಗಳಲ್ಲಿನ ನೀರನ್ನು ಹೊರತೆಗೆದು ಸ್ವಚ್ಛಗೊಳಿಸಿದರು.
ವಿವಿಧ ಮನೆಗಳಲ್ಲಿ ಹಾನಿಗೀಡಾಗಿದ್ದ ಪೀಠೋಪಕರಣಗಳು ವಾಹನಗಳು, ಅಡುಗೆ ಮನೆ ಸಾಮಗ್ರಿಗಳು, ವಿವಿಧ ವಸ್ತುಗಳನ್ನು ತೆಗೆದು ಸ್ವಚ್ಛಗೊಳಿಸಿದರು. ರಾಜ್ಯ ವಿಜ್ಞಾನ ಪರಿಷತ್ನ ಕೊಡಗು ಜಿಲ್ಲಾ ಸಮಿತಿಯ ಸಂಚಾಲಕ ಟಿ.ಜಿ. ಪ್ರೇಮಕುಮಾರ್, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಬಿ.ಬಿ. ಸಾವಿತ್ರಿ, ಸ್ಟುಡೆಂಟ್ ಪೊಲೀಸ್ ಕೆಡೆಟ್ ತಂಡದ ಕಮ್ಯೂನಿಟಿ ಪೊಲೀಸ್ ಅಧಿಕಾರಿ ಸದಾಶಿವ ಎಸ್. ಪಲ್ಲೇದ್, ಪರಿಷತ್ನ ಸದಸ್ಯರು, ಸ್ವಯಂಸೇವಕರು ಸ್ವಚ್ಛತಾ ಕಾರ್ಯ ನಡೆಸಿದರು.
ಪರಿಷತ್ನ ಉಪಾಧ್ಯಕ್ಷ ಎಂ.ಎನ್. ವೆಂಕಟನಾಯಕ್, ಸಹ ಕಾರ್ಯದರ್ಶಿ ಜಿ. ಶ್ರೀಹರ್ಷ, ಇವರೊಂದಿಗೆ ರಾಮನಗರ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಮಹೇಶ್ ಪ್ರಭು, ಉ.ರಾ. ನಾಗೇಶ್, ಟಿ.ಬಿ. ಮಂಜುನಾಥ್, ಮತ್ತಿತರ ಶಿಕ್ಷಕರು, ಬಡಾವಣೆಯ ಪ್ರಕಾಶ್, ಮತ್ತಿತರರು ಸ್ವಚ್ಛತಾ ಕಾರ್ಯಕ್ಕೆ ಸಹಕರಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ಬಿ.ಬಿ.ಎಂ.ಪಿ., ಪಟ್ಟಣ ಪಂಚಾಯಿತಿ ಕಾರ್ಮಿಕರು, ಬಡಾವಣೆ ನಿವಾಸಿಗಳು ಪಾಲ್ಗೊಂಡಿದ್ದರು. ಸ್ವಚ್ಛತಾ ಕಾರ್ಯ ಕೈಗೊಂಡ ಸ್ವಯಂಸೇವಕರಿಗೆ ಸೇವಾ ಸಂಸ್ಥೆಯ ವತಿಯಿಂದ ಆಹಾರ ಪೂರೈಸಲಾಯಿತು.