*ವೀರಾಜಪೇಟೆ, ಆ. 31: ಕೊಡಗು ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ಚೇಂದ್ರಿಮಾಡ ಗಣೇಶ್ ನಂಜಪ್ಪ ಅಧ್ಯಕ್ಷರಾಗಿ, ಚಪ್ಪಂಡ ಹರೀಶ್ ಉತ್ತಯ್ಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಪಟ್ರಪಂಡ ಕರುಂಬಯ್ಯ, ಕಾವಾಡಿಚಂಡ ಗಣಪತಿ, ಪುಗ್ಗೆರ ಎಸ್. ನಂದಾ, ಚೇನಂಡ ಕಾರ್ಯಪ್ಪ, ಮುಂಡ್ಯೋಳಂಡ ಸುರೇಶ್, ಹೆಚ್.ಕೆ. ಉತ್ತಯ್ಯ, ಬಿ.ಎಸ್. ಚಂದ್ರಶೇಖರ್, ಬಲ್ಲಚಂಡ ಟಿಟೋ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಪಿ.ಬಿ. ಮೋಹನ್‍ಕುಮಾರ್ ಕಾರ್ಯನಿರ್ವಹಿಸಿದರು.