ಮಡಿಕೇರಿ, ಆ. 31: ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂದರ್ಭ ನೆರವಿಗೆ ಧಾವಿಸಿ, ಸಾವಿರಾರು ಮಂದಿಯನ್ನು ರಕ್ಷಿಸಿ, ಮಣ್ಣಿನಡಿ ಹುದುಗಿ ಹೋಗಿದ್ದವರನ್ನು ಹೊರ ತೆಗೆಯುವಲ್ಲಿ ಶ್ರಮಿಸಿದ ಎನ್‍ಡಿಆರ್‍ಎಫ್, ಗರುಡ, ಸೇನಾಪಡೆಗಳಿಗೆ ಜಿಲ್ಲಾಡಳಿತದಿಂದ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ, ಹಿರಿಯ ಅಧಿಕಾರಿಗಳು ಬೀಳ್ಕೊಟ್ಟರು.