ಚೆಟ್ಟಳ್ಳಿ, ಆ. 31: ಬೆಂಗಳೂರಿನ ಕರ್ನಾಟಕ ಸ್ಟೇಟ್ ರೈಫಲ್ ಆಸೋಸಿಯೇಶನ್ ಆಯೋಜಿಸಿದ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಚೆಟ್ಟಳ್ಳಿಯ ಪುತ್ತರಿರ ಎಂ. ರಿಶಾಂಕ್ ನಂಜಪ್ಪ 50 ಮೀಟರ್ಸ್ ಓಪನ್ನ್ ಸೈಟ್ ಮೆನ್ ಟೀಂನಲ್ಲಿ ಚಿನ್ನದ ಪದಕ, 10 ಮೀ. ಏರ್‍ರೈಫಲ್ ಓಪನ್ ಸೈಟ್‍ನ ಯೂತ್ ಮೆನ್‍ನಲ್ಲಿ ಕಂಚಿನ ಪದಕ ಹಾಗೂ 50 ಮೀ. ಓಪನ್ ಸೈಟಿಂಗ್ ಜೂನಿಯರ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ಇತ್ತೀಚೆಗೆ ಮೈಸೂರು ಜಿಲ್ಲಾ ರೈಫಲ್ ಶೂಟಿಂಗ್ ಅಸೋಸಿಯೇಶನ್ ರವರು ಆಗಸ್ಟ್ 15 ರಂದು ನಡೆಸಿದ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮೊದಲ ಸ್ಥಾನವಾದ ಚಾಂಪಿಯನ್ ಆಫ್ ದ ಇಯರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಚೆÀನೈನಲ್ಲಿ ನಡೆಯಲಿರುವ ಆಲ್ ಇಂಡಿಯ ಜಿ.ವಿ. ಮವಲಂಕರ್ ಶೂಟಿಂಗ್ ಚಾಂಪಿಯನ್ ಶಿಪ್(ಪ್ರಿ-ನ್ಯಾಷನಲ್ಸ್)ಗೆ ಆಯ್ಕೆಯಾಗಿರುತ್ತಾರೆ.

ಉತ್ತರ ಕೊಡಗಿನ ಸೋಮವಾರಪೇಟೆ ತಾಲೂಕು ಚೇರಳ-ಶ್ರೀಮಂಗಲ ಗ್ರಾಮದ ಪುತ್ತರಿರ ರಾಜೇಶ್ ಮುತ್ತಪ್ಪ ಹಾಗೂ ವನಿತ ಮುತ್ತಪ್ಪ ದಂಪತಿಗಳ ಪುತ್ರನಾಗಿರುವ ಪುತ್ತರಿರ ರಿಶಾಂಕ್ ನಂಜಪ್ಪ ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ಓದುತ್ತಿರುವಾಗ 9ನೇ ತರಗತಿಯಲ್ಲಿ ಎನ್‍ಸಿಸಿಯ ಆಲ್ ಇಂಡಿಯ ಥಲ್ ಸೈನಿಕ್ ಕ್ಯಾಂಪ್‍ನಲ್ಲಿ ನವದೆಹಲಿಯಲ್ಲಿ ರಾಷ್ಟ್ರಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಸ್ತುತ ಮಡಿಕೇರಿಯ ಸಂತ ಮೈಕ¯ರ ಶಾಲೆಯಲ್ಲಿ ಮೊದಲ ಪಿಯುಸಿಯಲ್ಲಿ ವ್ಯಾಸಂಗ ಮಾಡುತಿದ್ದಾರೆ. ಕೊಡಗಿನಲ್ಲಿ ನಡೆಯುವ ಹಲವು ಶೂಟಿಂಗ್ ಸ್ಪರ್ಧೆಯಲ್ಲಿ ಉತ್ತಮ ಪ್ರದÀರ್ಶನ ನೀಡಿ ಹಲವು ವಿಭಾಗಗಳಲ್ಲಿ ಮೊದಲ ಹಾಗೂ ಎರಡನೇ ಸ್ಥಾನವನ್ನು ಗಳಿಸಿದ ರಿಶಾಂಕ್ ನಂಜಪ್ಪ ಯುವ ಶೂಟಿಂಗ್ ಪಟು ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾರೆ. - ಕರುಣ್ ಕಾಳಯ್ಯ