ಸುಂಟಿಕೊಪ್ಪ, ಆ. 31: ಅತಿವೃಷ್ಟಿಯಿಂದ ಪುನರ್ವಸತಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಗದಗ ಜಿಲ್ಲೆಯ ಗಜೇಂದ್ರಗಡ ನಿವಾಸಿಗಳಿಂದÀ ಆಶೋಕ್ ಕುಮಾರ್ ಭಾಗ್‍ಮಾರ್ ತಂಡದವರು ಚಾಪೆ, ಪಾತ್ರೆಗಳನ್ನು ವಿತರಿಸಿದರು.

ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ ಹಾಗೂ ಸರಕಾರಿ ಪ್ರೌಢಶಾಲೆ, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಪುನರ್ವಸತಿ ಕೇಂದ್ರದಲ್ಲಿ ನೆಲೆಸಿರುವ ಸಂತ್ರಸ್ತರಿಗೆ ಮಡಿಕೇರಿ ನ್ಯಾಯಾಧೀಶರಾದ ನೂರುನ್ನೀಸಾ ಹಾಗೂ ಆಶೋಕ್ ಕುಮಾರ್ ಭಾಗ್‍ಮಾರ್ ಚಾಪೆ, ಬಕೆಟ್, ಅಗತ್ಯ ವಸ್ತುಗಳನ್ನು ವಿತರಿಸಿದರು.

ಈ ಸಂದರ್ಭ ಎ.ಡಿ. ಕುಲಕೆರ್, ಪಿರೋಝ್ ಮೋಮಿನ್ ಮೋಹನ್ ಕಣಿಕೇರೆ ಇವರುಗಳು ಉಪಸ್ಥಿತರಿದ್ದರು.