*ಗೋಣಿಕೊಪ್ಪಲು, ಆ. 31: : ಈ ಬಾರಿಯ ದಸರಾ ಹಾಗೂ ಗೌರಿ ಗಣೇಶ ಉತ್ಸವಗಳನ್ನು ಸರಳ ರೀತಿಯಲ್ಲಿ ಆಚರಿಸುವದÀರ ಮೂಲಕ ಉತ್ಸವಕ್ಕೆ ಮಾಡುವ ಖರ್ಚನ್ನು ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರ ಬದುಕನ್ನು ಕಟ್ಟಿಕೊಡಲು ನೀಡುವದು ಉತ್ತಮ ಎಂದು ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಉತ್ಸವಕ್ಕೆ ಸರ್ಕಾರ ಅನುದಾನ ನೀಡುತ್ತದೆ. ಈ ಅನುದಾನವನ್ನು ಹೆಚ್ಚು ಬಳಕೆ ಮಾಡದೆ ಸರಳ ರೀತಿಯಲ್ಲಿ ಉತ್ಸವÀ ಆಚರಿಸಿ ಅನುದಾನದ ಹಣವನ್ನು ಸಂತ್ರಸ್ತರ ನೆರವಿಗೆ ನೀಡುವದು ಒಳಿತು. ಒಂಬತ್ತು ದಿನಗಳು ದೇವಿಯನ್ನು ಆರಾಧಿಸಿ ಪೂಜಿಸಿ ದಸರ ಉತ್ಸವವನ್ನು ಆಚರಿಸುವ ಮೂಲಕ ಈ ಬಾರಿಯ ದಸರ ಉತ್ಸವವನ್ನು ಸರಳತೆಯಿಂದ ನಡೆಸಬೇಕು ಎಂದು ಮನವಿ ಮಾಡಿದರು.

ಇದೇ ರೀತಿ ಮುಂಬರುವ ದಿನದಲ್ಲಿ ಬರುವ ಗೌರಿ ಗಣೇಶ ಉತ್ಸವವನ್ನು ಸಹ ಸರಳ ರೀತಿಯಲ್ಲಿ ಆಚರಿಸುವ ಮೂಲಕ ಸಂತ್ರಸ್ತರ ನೆರವಿಗೆ ಮುಂದಾಗಬೇಕು. ಸಂಘ ಸಂಸ್ಥೆಗಳು ಈ ಬಗ್ಗೆ ಗಮನ ಹರಿಸಿ ಸಂತ್ರಸ್ತರ ಬದುಕು ಕಟ್ಟುವ ಕಾಯಕಕ್ಕೆ ಮುಂದಾಗಬೇಕು ಎಂದು ತಿಳಿಸಿದರು ಗೋಷ್ಠಿಯಲ್ಲಿ ಆರ್.ಎಂ.ಸಿ. ಸದಸ್ಯ ಗುಮ್ಮಟ್ಟಿರ ಕಿಲನ್ ಗಣಪತಿ, ಉದ್ಯಮಿ ಅಜ್ಜಮಾಡ ಸುಮನ್ ಉಪಸ್ಥಿತರಿದ್ದರು.