ಶನಿವಾರಸಂತೆ, ಆ. 31: ಪಟ್ಟಣದ ಮಹಿಳಾ ಸಹಕಾರ ಸಮಾಜಕ್ಕೆ ಚುನಾವಣೆ ನಡೆದು ನೂತನ ಅಧ್ಯಕ್ಷೆಯಾಗಿ ಬಿ.ಎನ್. ಭುವನೇಶ್ವರಿ ಅವಿರೋಧವಾಗಿ ಆಯ್ಕೆಯಾದರು.

ನೂತನ ಆಡಳಿತ ಮಂಡಳಿಯ ಉಪಾಧ್ಯಕ್ಷೆಯಾಗಿ ರೇಖಾ, ಕಾರ್ಯದರ್ಶಿಯಾಗಿ ಗೀತಾ, ನಿರ್ದೇಶಕರಾಗಿ ಅನಿತಾ, ಶಿಲ್ಪಾ, ಸೌಭಾಗ್ಯಲಕ್ಷ್ಮಿ, ಶೀಲಾ, ಸ್ವಾತಿ, ಉಷಾ, ಶೋಭಾ, ಸುಮಿತ್ರಾ ಹಾಗೂ ವಾಣಿ ಆಯ್ಕೆಯಾಗಿರುತ್ತಾರೆ.