ಮಡಿಕೇರಿ, ಆ. 31: ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರ ನೋವಿಗೆ ಸ್ಪಂದಿಸಿರುವ ಹಾಕತ್ತೂರು ಗ್ರಾ.ಪಂ. ಆಡಳಿತ ಮಂಡಳಿ ತಮ್ಮ ಒಂದು ತಿಂಗಳ ಗೌರವ ಧನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ. ಒಟ್ಟು 11 ಸಾವಿರ ರೂ.ಗಳನ್ನು ಎಡಿಸಿ ಸತೀಶ್‍ಕುಮಾರ್ ಅವರ ಮೂಲಕ ನೀಡಲಾಯಿತು. ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ಮಂದ್ರೀರ ಶಾರದಾ ರಾಮಕೃಷ್ಣ, ಉಪಾಧ್ಯಕ್ಷ ಪಿ.ಎಸ್. ವಿಷ್ಣುಕುಮಾರ್, ಸದಸ್ಯರುಗಳಾದ ಪಿ.ಈ. ದೇವಿಪ್ರಾಸಾದ್, ಪಿಯೂಸ್ ಪೆರೇರಾ, ಹೇಮಾವತಿ, ಸರೋಜ, ಸವಿತಾ, ಪೂವಮ್ಮ ಹಾಜರಿದ್ದರು. ಪಂಚಾಯಿತಿ ನೌಕರÀರಾದ ಬಿ.ಜೆ. ಲೀಲಾವತಿ, ಪಿ.ಜಿ. ರಾಧಾಕೃಷ್ಣ, ಬಿ.ಆರ್. ಸೋವಿಯತ್ ಹಾಗೂ ಎಂ.ಎಂ. ಅಹಮ್ಮದ್ ಅವರುಗಳು ಕೂಡ ಒಟ್ಟು 3,500 ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ ಎಂದು ಅಧ್ಯಕ್ಷೆ ಮಂದ್ರೀರ ಶಾರದಾ ರಾಮಕೃಷ್ಣ ತಿಳಿಸಿದ್ದಾರೆ.