ಸಿದ್ದಾಪುರ, ಆ. 31: ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಎಸ್. ವೆಂಕಟೇಶ್ ಹಾಗೂ ಉಪಾಧ್ಯಕ್ಷರಾಗಿ ಎಂ.ಬಿ. ಜೋಯ್ ಅವಿರೋಧ ಆಯ್ಕೆಯಾಗಿದ್ದಾರೆ
ಸಂಘದ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದು, ಅವಿರೋಧ ಆಯ್ಕೆ ನಡೆಯಿತು. ನಿರ್ದೇಶಕರುಗಳಾಗಿ ಎಂ.ಸಿ. ವಾಸು, ಚೆಲುವಯ್ಯ, ಪಿ.ಕೆ. ಚಂದ್ರನ್, ಎಂ.ಹೆಚ್. ಮೂಸ, ಕೆ.ಕೆ. ಚಂದ್ರಕುಮಾರ್, ಎಸ್.ಬಿ. ಪ್ರತೀಶ್, ಸುನಿಲ್ ಕೆ.ಎಸ್. ಪ್ರಮೀಳಾ, ಕುಕ್ಕನ್ನೂರು ನಾಣಯ್ಯ, ಪಾರ್ವತಿ ಮತ್ತು ಕುಕ್ಕುನೂರು ಈರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಸಂದರ್ಭ ಸಹಕಾರ ಬ್ಯಾಂಕ್‍ನ ಕಾರ್ಯನಿರ್ವಾಹಣಾಧಿಕಾರಿ ಪ್ರಸÀನ್ನ ಸೇರಿದಂತೆ ಸಂಘದ ಸದಸ್ಯರುಗಳು ಹಾಜರಿದ್ದರು.