ಮಡಿಕೇರಿ, ಆ. 31: ಕೊಡಗು ಜಿಲ್ಲೆ ಶತಮಾನದಲ್ಲೇ ಅತ್ಯಂತ ಭೀಕರವಾದ ಪ್ರವಾಹದ ಹೊಡೆತದಿಂದ ನಲುಗಿ ಹೋಗಿದೆ. ಕೊಡಗಿನ ಜನತೆಗೆ ಅತ್ಯಂತ ತುರ್ತಾಗಿ ವೈದ್ಯಕೀಯ ನೆರವಿನ ಅವಶ್ಯಕತೆಯಿದ್ದು, ಅದಕ್ಕಾಗಿ ಡಿಆರ್‍ಎಂ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಿಂದ ವೈದ್ಯರು ಹಾಗೂ ನುರಿತ ತಾಂತ್ರಿಕ ಸಿಬ್ಬಂದಿ ವರ್ಗ ಎಲ್ಲಾ ಅವಶ್ಯಕ ವೈದ್ಯಕೀಯ ಉಪಕರಣಗಳು, ಔಷಧಿಗಳೊಡನೆ ಕಾರ್ಯೋನ್ಮುಖರಾಗಿದ್ದಾರೆ.

ಈ ಸಂದರ್ಭ ಕೊಡಗಿನ ಪ್ರವಾಹ ಪೀಡಿತ ಜನತೆಗೆ ಎಲ್ಲಾ ರೀತಿಯ ವೈದ್ಯಕೀಯ ನೆರವು, ಚಿಕಿತ್ಸೆಯನ್ನು ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ಡಿಆರ್‍ಎಂ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತವಾಗಿ ನಡೆಸಿಕೊಡಲಾಗುತ್ತದೆ. ನಗರದ ಮಿಷನ್ ಆಸ್ಪತ್ರೆಯ ರಸ್ತೆಯಲ್ಲಿರುವ ಜೀವಧಾರಾ ರಕ್ತನಿಧಿಯಲ್ಲಿ ರಕ್ತ ಹಾಗೂ ಸಂಬಂಧಿತ ಸೇವೆಗಳನ್ನು ಸಂಪೂರ್ಣ ಉಚಿತವಾಗಿ ಒದಗಿಸಲಾಗುತ್ತದೆ.

ಈ ಕುರಿತ ಯಾವದೇ ಸಹಾಯ, ಮಾಹಿತಿಗೆ ದೂರವಾಣಿ ಸಂಖ್ಯೆ 0821 2444936 ಜೀವಧಾರ ರಕ್ತನಿಧಿ, 08212411344 ಡಿಆರ್‍ಎಂ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ಸಂಪರ್ಕಿಸಬಹುದು ಎಂದು ಮೈಸೂರಿನ ನಗರ ಬಿ.ಜೆ.ಪಿ. ಅಧ್ಯಕ್ಷ ಡಾ. ಬಿ.ಹೆಚ್. ಮಂಜುನಾಥ್ ತಿಳಿಸಿದ್ದಾರೆ.