*ಗೋಣಿಕೊಪ್ಪ, ಆ. 31: ಜಿಲ್ಲೆಯ ವಿವಿಧ ಇಲಾಖೆ ಗಳಲ್ಲಿರುವ ಖಾಲಿ ಹುದ್ದೆಯನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರಿಗೆ ಮನವಿ ಸಲ್ಲಿಸಿದರು. ಇಲಾಖೆಯ ಐ.ಟಿ.ಡಿ.ಪಿ.ಯಲ್ಲಿ 164 ಹುದ್ದೆಯಲ್ಲಿ 146 ಹುದ್ದೆಗಳು ಖಾಲಿ ಇದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯ 44 ಹುದ್ದೆಗಳಲ್ಲಿ 40 ಹುದ್ದೆಗಳು ಖಾಲಿ ಇವೆ.ಬಿ.ಸಿ.ಎಂ. ಇಲಾಖೆಯಲ್ಲಿ 229 ಹುದ್ದೆಗಳಲ್ಲಿ 104, ಅಂಗವಿಕಲ ಇಲಾಖೆಯಲ್ಲಿ 4 ಹುದ್ದೆಗಳಲ್ಲಿ 3 ಹುದ್ದೆ, ಅಲ್ಪಸಂಖ್ಯಾತ ಇಲಾಖೆಯಲ್ಲಿ 77 ಹುದ್ದೆಗಳಲ್ಲಿ 60 ಹುದ್ದೆಗಳು ಖಾಲಿ ಇದೆ ಎಂದು ಸಿ.ಕೆ. ಬೊಪಯ್ಯ ಮಾಹಿತಿ ನೀಡಿದ್ದಾರೆ.