ಮಡಿಕೇರಿ, ಆ. 31: ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆಗಳ ಉಪಟಳ ಹೆಚ್ಚಳವಾಗಿದ್ದು, ಅವುಗಳನ್ನು ಕಾಡಿಗಟ್ಟುವ ವಿಶೇಷ ಕಾರ್ಯಾಚರಣೆ ಸೆಪ್ಟೆಂಬರ್ 6ರಂದು ಅರಣ್ಯ ಇಲಾಖೆಯು ಹಮ್ಮಿಕೊಂಡಿದೆ. ಆ ದಿನದಂದು ಸಾರ್ವಜನಿಕರು, ಶಾಲಾಮಕ್ಕಳು, ಕಾರ್ಮಿಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಗ್ರಾಮ ಪಂಚಾಯಿತಿ ಪ್ರಕಟಣೆ ತಿಳಿಸಿದೆ.