*ಸಿದ್ದಾಪುರ, ಆ. 31: ಪ್ರತೀ ವರ್ಷ ಸೆಪ್ಟಂಬರ್ 3 ರಂದು ಮಾಲ್ದಾರೆಯ ಊರುಮಂದ್ನಲ್ಲಿ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದ ಕೈಲು ಮುಹೂರ್ತ ಸಂತೋಷಕೂಟವನ್ನು ಪ್ರಸಕ್ತ ವರ್ಷ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಿಂದ ಉಂಟಾಗಿರುವ ವಿಪತ್ತಿನ ಹಿನ್ನೆಲೆಯಲ್ಲಿ ಆಚರಿಸದಿರಲು ತೀರ್ಮಾನಿಸಲಾಗಿದೆ ಎಂದು ಆಚರಣಾ ಸಮಿತಿ ಅದ್ಯಕ್ಷ ಅಜ್ಜಿನಿಕಂಡ ಕುಶಾಲಪ್ಪ (ಕಾಶಿ) ತಿಳಿಸಿದ್ದಾರೆ. ಜಿಲ್ಲೆಯ ಗಡಿ ಭಾಗವಾದ ಮಾಲ್ದಾರೆಯ ಸುತ್ತಲಿನ ಗ್ರಾಮಗಳಾದ ಬಾಡಗ-ಬಾಣಂಗಾಲ, ಗಟ್ಟದಹಳ್ಳ, ಲಿಂಗಾಪುರ, ಮೂಡಬಯಲು, ಗುಡ್ಲೂರು ಗ್ರಾಮದ ರೈತಾಪಿ ವರ್ಗ ಮತ್ತು ಬೆಳೆಗಾರರು ಮಾಲ್ದಾರೆಯ ಊರುಮಂದ್ನಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಕೈಲು ಮುಹೂರ್ತ ಆಚರಿಸುತ್ತಿದ್ದರು. ಪ್ರಾಕೃತಿಕ ವಿಕೋಪದಿಂದ ಉಂಟಾಗಿರುವ ಜೀವ ಹಾನಿ ಮತ್ತು ನಷ್ಟಗಳಿಗೆ ವಿಷಾದ ವ್ಯಕ್ತಪಡಿಸಿರುವ ಆಚರಣಾ ಸಮಿತಿಯ ಪ್ರಮುಖರು ಸಮಿತಿಯ ವತಿಯಿಂದ ದೇಣಿಗೆ ಸಂಗ್ರಹಿಸಿ ಸಂತ್ರಸ್ತರ ನೆರವಿಗೆ ಅಲ್ಪ ಪ್ರಮಾಣದ ಸಹಾಯ ನೀಡಲು ತೀರ್ಮಾನಿಸಿರುವದಾಗಿ ತಿಳಿಸಿದ್ದಾರೆ.