ಆಲೂರು-ಸಿದ್ದಾಪುರ, ಆ. 31: ಗ್ರಾ.ಪಂ. ವ್ಯಾಪ್ತಿಯ ಕಡಲೆಮಕ್ಕಿ, ಆಲೂರು, ಮಾಲಂಬಿ ಗ್ರಾಮಗಳಲ್ಲಿ ವಾಸ ಮಾಡುತ್ತಿರುವ ಗಿರಿಜನ ಹಾಡಿ ನಿವಾಸಿಗಳಿಗೆ ಅಕ್ಕಿ, ಬೇಳೆ ಮುಂತಾದ ಆಹಾರ ಪದಾರ್ಥ ಸೇರಿದಂತೆ ಕಂಬಳಿ, ಸೆÉ್ವಟರ್ ಮುಂತಾದ ಉಡುಪುಗಳನ್ನು ವಿತರಣೆ ಮಾಡಲಾಯಿತು. ಪ್ರತಿವರ್ಷ ಮಳೆಗಾಲದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸ್ವಚ್ಛ ಸರ್ವೆ ಶಿಕ್ಷಣ ಸಂಸ್ಥೆಯ ವರದಿಯಂತೆ ಗಿರಿಜನ ನಿವಾಸಿಗಳಿಗೆ ಇವುಗಳನ್ನು ವಿತರಣೆ ಮಾಡುವದು ವಾಡಿಕೆ, ಅದರಂತೆ ಆಲೂರುಸಿದ್ದಾಪುರ ಗ್ರಾ.ಪಂ. ಕಚೇರಿ ಹಾಗೂ ಮಾಲಂಬಿ ಗಿರಿಜನ ಆಶ್ರಮ ಶಾಲೆಯಲ್ಲಿ ಗಿರಿಜನ ನಿರಾಶ್ರಿತರಿಗೆ ವಿತರಣೆ ಮಾಡಲಾಯಿತು.
ಆಲೂರು-ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ವೀಣಾ ರಮೇಶ್, ಗ್ರಾ.ಪಂ. ಸದಸ್ಯ ಎಂ.ಆರ್. ತೀರ್ಥಕುಮಾರ್, ಎಸ್.ಜೆ. ಪ್ರಸನ್ನ, ಮಾಜಿ ಗ್ರಾ.ಪಂ. ಮಾಜಿ ಸದಸ್ಯ ಪಿ.ಎನ್. ಗಂಗಾಧರ್, ಮಾಲಂಬಿ ಆಶ್ರಮ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ರಮೇಶ್ ಮುಂತಾದವರು ವಿತರಣೆ ಮಾಡಿದರು.