ಮಡಿಕೇರಿ, ಆ. 31: ಕೊಡಗಿನಲ್ಲಿ ಉಂಟಾಗಿರುವ ಅತಿವೃಷ್ಟಿಗೆ ಸಂಬಂಧಿಸಿದಂತೆ ವಿಧಾನಪರಿಷತ್ನ ಎಲ್ಲಾ ಸದಸ್ಯರುಗಳÀು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ 25 ಲಕ್ಷ ರೂ. ಅನುದಾನವನ್ನು ನೀಡುವಂತೆ ಎಂಎಲ್ಸಿ ಸುನಿಲ್ ಸುಬ್ರಮಣಿ ಮನವಿ ಮಾಡಿದ್ದಾರೆ. ಈ ಕುರಿತು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸುನಿಲ್ ಮನವಿ ಸಲ್ಲಿಸಿದ್ದು, ವಿವರ ಇಂತಿದೆ:-
ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಉಂಟಾದ ಅತಿವೃಷ್ಟಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಮನೆ, ಆಸ್ತಿ- ಪಾಸ್ತಿ ಕಳೆದುಕೊಂಡಿರುವದಲ್ಲದೆ, ಸಾರ್ವಜನಿಕ ರಸ್ತೆ, ಸೇತುವೆ ಸಂಪರ್ಕವನ್ನು ಕಳೆದುಕೊಂಡು ಜಿಲ್ಲೆ ಮಳೆಯಿಂದ ತತ್ತರಿಸಿದೆ. ನಮ್ಮ ಪುಟ್ಟ ಜಿಲ್ಲೆಯು ಸ್ವಾತಂತ್ರ್ಯ ಭಾರತಕ್ಕೆ ಎರಡು ಮಹಾನ್ ದಂಡ ನಾಯಕರನ್ನು ನೀಡಿದ ವೀರಭೂಮಿ ಕೊಡಗಿನ ಕಾವೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮತ್ತು ನೆರೆ ರಾಜ್ಯಗಳಿಗೂ, ಬೆಂಗಳೂರಿನ ಅರ್ಧ ಭಾಗಕ್ಕೆ ಕುಡಿಯುವ ನೀರನ್ನು ನೀಡುತ್ತಿದೆ. ಆದರೆ ಪ್ರಾಕೃತಿಕವಾಗಿ ಅತ್ಯಂತ ರಮಣೀಯ ಪ್ರದೇಶವಾಗಿದ್ದ ಕೊಡಗಿನಲ್ಲಿಂದು ಸ್ಮಶಾನಮೌನ ಆವರಿಸಿದೆ.
ಕೊಡಗು ಜಿಲ್ಲೆಯನ್ನು ಮತ್ತೆ ಮೊದಲಿನಂತೆ ಕಟ್ಟಲು ತಮ್ಮ ಮೂಲಕ ರಾಜ್ಯದ ಎಲ್ಲಾ ವಿಧಾನಪರಿಷತ್ತಿನ ಸದಸ್ಯರುಗಳು ಕೊಡಗು ಜಿಲ್ಲೆಗೆ ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ 25 ಲಕ್ಷಗಳ ಅನುದಾನವನ್ನು ನೀಡುವಂತೆ ವಿನಂತಿಸಿಕೊಂಡಿದ್ದೇನೆ ಎಂದು ಸುನಿಲ್ ಪತ್ರ ಬರೆದಿದ್ದಾರೆ.
.