ಮಡಿಕೇರಿ, ಆ. 31: ಜಿಲ್ಲೆಯಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪದಿಂದ ರಸ್ತೆಗಳು ಹಾನಿಯಾಗಿದ್ದು, ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿದ್ದು, ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊಟೇಲ್, ರೆಸಾರ್ಟ್ ಹೋಂಸ್ಟೇ ಹಾಗೂ ಇತರ ಖಾಸಗಿ ವಸತಿ ಗೃಹಗಳನ್ನು ಉಲ್ಲೇಖಿತ ಪತ್ರದಂತೆ ತಾ. 31 ರವರೆಗೆ ಪ್ರವಾಸಿಗರ ಹಾಗೂ ಇತರ ಅತಿಥಿಗಳ ವಾಸ್ತವ್ಯವನ್ನು ಕಡ್ಡಾಯವಾಗಿ ರದ್ದು ಪಡಿಸಲು ಆದೇಶಿಸಲಾಗಿತ್ತು.
ಜಿಲ್ಲೆಯಲ್ಲಿ ಮತ್ತೆ ಮಳೆಯಾU Àುತ್ತಿದ್ದು, ಹಾನಿಗೊಂಡ ಪ್ರದೇಶ, ಮಾರ್ಗಗಳು ಪೂರ್ಣವಾಗಿ ದುರಸ್ತಿ ಗೊಳ್ಳದೇ ಇರುವದರಿಂದ ಹಾಗೂ ಹಾನಿಗೊಂಡ ಸ್ಥಳಗಳಿಗೆ ಪ್ರವಾಸಿಗರು ಭೇಟಿ ನೀಡಿ ಪ್ರಾಣ ಹಾನಿ ಹಾಗೂ ಇತರ ತೊಂದರೆ ಗಳುಂಟಾಗುವ ಸಾಧ್ಯತೆ ಇರುವದರಿಂದ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಪ್ರವೇಶ ನಿಷೇಧವನ್ನು 7 ದಿನಗಳ ಅವಧಿಗೆ ವಿಸ್ತರಿಸುವಂತೆ ಪೊಲೀಸ್ ಅಧೀಕ್ಷಕರು ಕೋರಿದ್ದು, ಈ ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪದಿಂದ ಮೂಲಭೂತ ಸೌಲಭ್ಯಗಳು ಪುನರ್ ನಿರ್ಮಾಣ ವಾಗದೇ ದುರಸ್ತಿಯಲ್ಲಿರುವ ಕಾರಣ ಹೊಟೇಲ್, ರೆಸಾರ್ಟ್, ಹೋಂ ಸ್ಟೇ ಹಾಗೂ ಇತರ ಖಾಸಗಿ ವಸತಿ ಗೃಹಗಳಲ್ಲಿ ಪ್ರವಾಸಿಗರ, ಅತಿಥಿಗಳ ವಾಸ್ತವ್ಯವನ್ನು ರದ್ದು ಪಡಿಸಿರುವ ಆದೇಶದ ಅವಧಿ ಯನ್ನು ತಾ. 9ರವರೆಗೆ ವಿಸ್ತಿರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.