ಮಡಿಕೇರಿ, ಆ. 31: ಜಿಲ್ಲೆಯ ನೆರೆ ಸಂತ್ರಸ್ತರಿಗೆ ನೆರವು ನೀಡಲು ಬಾಳಲೆ ಕೊಡವ ಸಮಾಜವು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ದಾನಿಗಳಿಂದ ಸಹಾಯ ಕ್ರೋಢೀಕರಿಸಲಾಗುತ್ತಿದ್ದು, ದಾನಿಗಳು ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೊಡವ ಸಮಾಜದ ಖಾತೆ ಸಂಖ್ಯೆ 2345ಕ್ಕೆ ಹಣ ಸಂದಾಯ ಮಾಡಬಹುದು ಎಂದು ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.