*ಸುಂಟಿಕೊಪ್ಪ, ಆ. 31: ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪು ತೋಡು ವಿಭಾಗದಲ್ಲಿ ರೈತರು ಅನಾದಿ ಕಾಲದಿಂದಲೂ ಭತ್ತದ ಗದ್ದೆಯನ್ನು ಲಾಭ ನಷ್ಟದ ಲೆಕ್ಕಾಚಾರವನ್ನು ಮಾಡದೆ ರೂಢಿಸಿಕೊಂಡು ಬಂದಿದ್ದಾರೆ. ಈ ವರ್ಷದ ಅತಿವೃಷ್ಟಿಯಿಂದ 50 ಎಕ್ರೆಗೂ ಅಧಿಕ ನಾಟಿ ಮಾಡಿದ ಗದ್ದೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು ಮುಂದೇನು ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಕಂಬಿಬಾಣೆಯ ದಿ. ಬಿದ್ದಪ್ಪ ಅವರ ಪುತ್ರ ಪಾಂಡನ ಜಗದೀಶ, ಕುದುಕುಳಿ ಮಹೇಶ್, ಪೊನ್ನಪ್ಪ, ಕಲ್ಲು ಗದ್ದೆ ನಾಗಪ್ಪ, ಹೊಸೋಕ್ಲು ಜೋಯಪ್ಪ, ಕೆ.ಎಸ್. ನೀಲಮ್ಮ, ಬಿ.ಎಲ್. ಚಂದ್ರಶೇಖರ, ಮೀನಾಕುಮಾರಿ, ಅವರಿಗೆ ಸೇರಿದ ನಾಟಿ ಮಾಡಿದ ಗದ್ದೆಗಳು ಕೊಚ್ಚಿ ಹೋಗಿದ್ದು, ಮರಳು ತುಂಬಿದÀ ಮರು ಭೂಮಿಯಂತಾಗಿದೆ. ಈ ಗ್ರಾಮದ ಕೆ.ಎಂ. ರಾಜೇಶ್ ಮತ್ತು ಕೆ.ಎಂ. ಬಿಂಧೂದರ ಸೇನೆಯಲ್ಲಿ ಕರ್ತವ್ಯದಲ್ಲ್ಲಿದ್ದಾರೆ.

ನಂದಕುಮಾರ್ ಸುಬ್ರ್ರಾಯ ಸೇನೆಯಿಂದ ನಿವೃತ್ತರಾಗಿದ್ದು, ಇವರಿಗೆ ಸೇರಿದ ಗದ್ದೆಯೂ ನೀರು ಪಾಲಾಗಿದೆ. ಗದ್ದೆಯನ್ನು ಪಾಳುಬಿಡುತ್ತಿದ್ದ ಇಂದಿನ ಕಾಲಘಟ್ಟದಲ್ಲಿ ನಾವುಗಳು ಕಷ್ಟಪಟ್ಟು ಗದ್ದೆ ನಾಟಿ ಮಾಡಿದ್ದು, ಇದೀಗ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಇನ್ನು ಮುಂದೆ ಈ ಗದ್ದೆಯಲ್ಲಿ ಬೇಸಾಯ ಮಾಡುವದು ಸಾಧÀ್ಯವಿಲ್ಲವೆಂದು ಕೃಷಿಕರಾದ ಮಹೇಶ್, ಪಾಂಡನ ಜಗದೀಶ್ ಆತಂಕ ವ್ಯಕ್ತಪಡಿಸಿದ್ದಾರೆ.