ಸೋಮವಾರಪೇಟೆ, ಆ.31: ರಾಜ್ಯ ಸರ್ಕಾರದಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೂಲಕ ನೀಡಲಾಗುತ್ತಿರುವ ವಿಶೇಷ ಉಚಿತ ಪಡಿತರವನ್ನು ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಲಾಯಿತು. ಮಾದಾಪುರ ನ್ಯಾಯಬೆಲೆ ಅಂಗಡಿಗೆ ಒಳಪಟ್ಟಂತೆ 1346 ಪಡಿತರ ಚೀಟಿದಾರರಿದ್ದು, ಎಲ್ಲಾ ಪಡಿತರ ಚೀಟಿದಾರರಿಗೆ ಅಕ್ಕಿ, ಬೇಳೆ, ಉಪ್ಪು, ತಾಳೆ ಎಣ್ಣೆ, ಹಾಲು, ಸಕ್ಕರೆಯನ್ನು ವಿತರಿಸಲಾಯಿತು. ಆಹಾರ ಇಲಾಖಾ ನಿರೀಕ್ಷಕ ರಾಜಣ್ಣ ಸೇರಿದಂತೆ ಗ್ರಾ.ಪಂ. ಸದಸ್ಯರುಗಳು ಈ ಸಂದರ್ಭ ಹಾಜರಿದ್ದರು.