ಮಡಿಕೇರಿ, ಆ. 31: ಪೊನ್ನಂಪೇಟೆಯ ಸಾಹಿಶಂಕರ ಶಾಲೆಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಚಕ್ಕೆರ ಮನು ಸೋಮಯ್ಯ ಹಾಗೂ ಮುರುಗೇಶ್ ಹಾಗೂ ಮುಖ್ಯೋಪಾದ್ಯಾಯನಿ ಲತಾ ಚಂಗಪ್ಪ ಉಪಸ್ಥಿತರಿದ್ದರು.

ಈ ಸಂಸ್ಥೆಯ ಹಿರಿಯ ಶಿಕ್ಷಕಿ ಡಯಾನಾ ರಕ್ಷಾ ಬಂಧನ ಮಹತ್ವವನ್ನು ತಿಳಿಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಕ್ಕೆರ ಮನು ಸೋಮಯ್ಯ ಈ ಕಾರ್ಯಕ್ರಮದ ಉದ್ದೇಶ, ಅದರ ವ್ಯಾಪ್ತಿ, ಮಹತ್ವ ಹಾಗೂ ಈ ಸಹೋದರತ್ವದಿಂದಾಗಿ ದೇಶದಲ್ಲಿ ಒಗ್ಗಟ್ಟನ್ನು ಸಾಧಿಸಬಹುದಾಗಿದೆ. ಇದು ಕೇವಲ ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗಿರದೆ ಇಡೀ ದೇಶಕ್ಕೆ ವ್ಯಾಪಿಸಲಿ ಎಂದರು. ರಕ್ಷಾ ಬಂಧನವನ್ನು ವಿತರಿಸಿ ಅವರ ಮಧ್ಯೆ ಭ್ರಾತೃತ್ವದ ಮಹತ್ವವನ್ನು ತಿಳಿಸಿ ಜಾಗೃತಿ ಮೂಡಿಸಿದರು. ಶಿಕ್ಷಕಿಯರಾದ ನಸೀಬಾ ಕಾರ್ಯಕ್ರಮ ನಿರೂಪಿಸಿ, ನೀತಿ ಪಿ. ವಂದಿಸಿದರು.