ಮಡಿಕೇರಿ, ಆ. 31: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾಗಿದ್ದು ಕನ್ನಡದಲ್ಲಿ ವಿಜ್ಞಾನ ವಿಷಯದ ಪುಸ್ತಕಗಳ ಬರವಣಿಗೆಯನ್ನು ಪ್ರೋತ್ಸಾಹಿಸುವ ಸಲುವಾಗಿ 2009 ರಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ಶ್ರೇಷ್ಠ ಪುಸ್ತಕ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದೆ.

2018-19ನೇ ಸಾಲಿನ ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ಕೃಷಿ, ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ವಿಷಯಗಳಲ್ಲಿ ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಪುಸ್ತಕಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ವಿಷಯಕ್ಕೆ ಗರಿಷ್ಠ 2 ಪ್ರಶಸ್ತಿಗಳನ್ನು ನೀಡಲಾಗುವದು. ಆಯ್ಕೆಯಾದ ಲೇಖಕರಿಗೆ ರೂ.25 ಸಾವಿರಗಳ ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಸನ್ಮಾನಿಸಲಾಗುವದು. ಜನವರಿ 2017 ರಿಂದ ಡಿಸೆಂಬರ್ 2018 ರೊಳಗೆ ಈ ವಿಷಯಗಳಲ್ಲಿ ಕನ್ನಡದಲ್ಲಿ ಪ್ರಕಟಗೊಂಡ ಪುಸ್ತಕಗಳನ್ನು ಈ ಪ್ರಶಸ್ತಿಗೆ ಸಲ್ಲಿಸಬಹುದಾಗಿದೆ. ಲೇಖಕರು ನಿಗದಿತ ನಮೂನೆಯ ಅರ್ಜಿಯೊಂದಿಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಜನವರಿ 5, 2019 ಸಂಜೆ 5.30 ರೊಳಗೆ ಸದಸ್ಯ ಕಾರ್ಯದರ್ಶಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಭವನ, 24/2, 21 ನೇ ಮುಖ್ಯರಸ್ತೆ, ಬಿ.ಎಸ್.ಎನ್.ಎಲ್ ಕಚೇರಿ ಹತ್ತಿರ ಬನಶಂಕರಿ 2ನೇ ಹಂತ ಬೆಂಗಳೂರು-560070 ಇಲ್ಲಿಗೆ ಕಳುಹಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಇತರೆ ವಿವರಗಳಿಗೆ ಅಕಾಡೆಮಿಯ ವೆಬ್‍ಸೈಟ್ ತಿತಿತಿ.ಞsಣಚಿಛಿಚಿಜemಥಿ.iಟಿ ವೀಕ್ಷಿಸಬಹುದಾಗಿದೆ.