ಮಡಿಕೇರಿ, ಆ. 31: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2018-19ನೇ ಸಾಲಿನ ಶಿಷ್ಯ ವೇತನಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಶಾಸ್ತ್ರೀಯ ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾ ಕೀರ್ತನ ಮತ್ತು ಗಮಕ ಈ ಮೂರು ಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ 16 ರಿಂದ 24 ವರ್ಷ ವಯೋಮಾನದ ಒಳಗಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 10 ಸಾವಿರ ಶಿಷ್ಯ ವೇತನವಾಗಿ ನೀಡಲಾಗುವದು. ಅರ್ಜಿಗಳನ್ನು ಅಕಾಡೆಮಿಯ ಕಚೇರಿ ವೇಳೆಯಲ್ಲಿ (ಬೆಳಿಗ್ಗೆ 10 ರಿಂದ ಸಂಜೆ 5.30 ಗಂಟೆವರೆಗೆ) ಉಚಿತವಾಗಿ ಪಡೆಯಬಹುದು. ಅಲ್ಲದೇ ಅಕಾಡೆಮಿ ಅಂತರ್ಜಾಲತಾಣ ತಿತಿತಿ. ಞಚಿಡಿಟಿಚಿಣಚಿಞಚಿsಚಿಟಿgeeಣಚಿಟಿಡಿiಣಥಿಚಿಚಿಛಿಚಿಜemಥಿ.ಛಿom ಮೂಲಕ ಪಡೆಯಬಹುದಾಗಿದೆ.
ಬೇರೆ ಬೇರೆ ಜಿಲ್ಲೆಯ ಅಭ್ಯರ್ಥಿಗಳು ಆಯಾಯ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಉಚಿತವಾಗಿ ಅರ್ಜಿ ಪಡೆಯಬಹುದಾಗಿದೆ. ಅರ್ಜಿಯ ಜೊತೆ ಇತ್ತೀಚಿನ ಪಠ್ಯ ಕ್ರಮವನ್ನು ಸಹ ನೀಡಲಾಗಿದೆ. ಅಂಚೆ ಮೂಲಕ ಅರ್ಜಿ ಮತ್ತು ಪಠ್ಯಕ್ರಮ ಪಡೆಯಲಿಚ್ಛಿಸುವವರು ರೂ. 10 ಸ್ಟಾಂಪ್ ಹಚ್ಚಿದ ಸ್ವವಿಳಾಸವುಳ್ಳ ಲಕೋಟೆಯನ್ನು ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು-560002 ಇಲ್ಲಿಗೆ ಕಳುಹಿಸಿಕೊಡಬೇಕಾಗಿ ಕೋರಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಮೇಲಿನ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿರುತ್ತದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿರುತ್ತದೆ. ನಂತರ ಬಂದ ಅರ್ಜಿಗಳನ್ನು ಪರಿಗಣಿಸುವದಿಲ್ಲ.