ಸುಂಟಿಕೊಪ್ಪ, ಆ. 31: ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯಲ್ಲಿ ಶಾಲೆ ಆರಂಭವಾದಾಗ ಮಡಿಕೇರಿ ವಿಕಾಸ್ ಜನಸೇವಾ ಟ್ರಸ್ಟ್ ಮತ್ತು ಚಿಕ್ಕ ಅಳುವಾರ ಸ್ನಾತಕೋತ್ತರ ಕೇಂದ್ರದ ವತಿಯಿಂದ ನೆರೆ ಹಾವಳಿ ಸಂತ್ರಸ್ತ ಶಾಲಾ ಕಾಲೇಜಿನ ಮಕ್ಕಳಿಗೆ ನೆರೆ ಹಾವಳಿ ಸಂಕಷ್ಟದಿಂದ ಮನಸ್ಸಿಗೆ ಸಮಾಧಾನ (ಮುದ) ನೀಡಲು ಚಿತ್ರ ಕಲೆ ನಡೆಸಲಾಯಿತು.

ಮಕ್ಕಳು ತಮ್ಮ ನೋವನ್ನು ಮರೆತು ಪ್ರಕೃತಿ ಚಿತ್ರ, ಪ್ರಕೃತಿ ವಿಕೋಪ ಚಿತ್ರ ಮತ್ತು ಭೂ ಕುಸಿತ, ನೆರೆ ಹಾವಳಿ, ಜಲಪ್ರಳಯ ಇತ್ಯಾದಿಗಳನ್ನು ಬಿಡಿಸಿ ಸಂತಸಪಟ್ಟರು. ವಿಕಾಸ ಸೇವಾ ಟ್ರಸ್ಟ್‍ನ ಗೌರವಾಧ್ಯಕ್ಷ ಪುಟ್ಟಪ್ಪ, ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕರಾದ ಕೆ.ಜೆ. ರಾಬಿನ್, ಹರಿಣಾಕ್ಷಿ, ಮುಖ್ಯ ಶಿಕ್ಷಕರಾದ ಬಾಲಕೃಷ್ಣ, ಎಂ.ಎನ್. ಲತಾ, ಚಿತ್ರಕಲಾ ಶಿಕ್ಷಕಿ ಮಂಜುಳಾ ಕೆರೂರು, ತಾಲೂಕು ಪತ್ರಕರ್ತರ ಸಂಘದ ನಿರ್ದೇಶಕರಾದ ವಹೀದ್ ಜಾನ್ ಮತ್ತಿತರರು ಇದ್ದರು.