ಮಡಿಕೇರಿ, ಆ. 31: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ಹಲವಾರು ಜಾನುವಾರುಗಳು ಸಂಕಷ್ಟಕ್ಕೀಡಾಗಿದ್ದು, ಈ ಜಾನುವಾರುಗಳನ್ನು ರಕ್ಷಿಸುವದು ಹಾಗೂ ಪೆÇೀಷಿಸುವದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಭೂ ಕುಸಿತ ದಿಂದಾಗಿ ಹಲವಾರು ಜಾನುವಾರುಗಳು ತನ್ನ ಮಾಲೀಕನಿಲ್ಲದೆ ಜೀವನೋ ಪಾಯಕ್ಕಾಗಿ ಅಲೆಮಾರಿಯಾಗುವ ಸಾಧ್ಯತೆ ಇದೆ. ಈ ಜಾನುವಾರುಗಳನ್ನು ರಕ್ಷಿಸಿ ಅವುಗಳನ್ನು ಪಾಲನೆಗಾಗಿ ಸರ್ಕಾರವು ಸೋಮವಾರಪೇಟೆ ತಾಲೂಕು ಕುಶಾಲನಗರ ಹೋಬಳಿ ಕೂಡಿಗೆ ಜರ್ಸಿ ತಳಿ ಸಂವರ್ಧನಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಿದ್ದು, ಪರಿಸ್ಥಿತಿ ಸುಧಾರಿಸುವ ತನಕ ಅಂತಹ ಜಾನುವಾರುಗಳನ್ನು ಕ್ಷೇತ್ರದಲ್ಲಿ ಪಾಲನೆ ಕೈಗೊಳ್ಳಲು ಕ್ರಮ ವಹಿಸಲಾಗಿದೆ.
ಈ ಸಂಬಂಧ ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದ್ದು ದೂರವಾಣಿ ಸಂಖ್ಯೆ ಈ ಕೆಳಗಿನಂತಿರುತ್ತವೆ. ಸಹಾಯವಾಣಿ ಸಂಖ್ಯೆ 08272-229449.
ಅಲ್ಲದೇ ಈ ಸಂಬಂಧ ಈ ಕೆಳಗಿನ ದೂರವಾಣಿಗಳನ್ನು ಸಹ ಸಂಪರ್ಕಿಸಬಹುದಾಗಿದೆ
ಸಹಾಯಕ ನಿರ್ದೇಶಕರ ಕಚೇರಿ, ಪಶು ಆಸ್ಪತ್ರೆ, ಮಡಿಕೇರಿ ದೂ. 08272-228805. ಸಹಾಯಕ ನಿರ್ದೇಶಕರ ಕಚೇರಿ, ಪಶು ಆಸ್ಪತ್ರೆ, ವೀರಾಜಪೇಟೆ ದೂ. 08274-257228. ಸಹಾಯಕ ನಿರ್ದೇಶಕರ ಕಚೇರಿ, ಪಶು ಆಸ್ಪತ್ರೆ, ಸೋಮವಾರ ಪೇಟೆ ದೂ. 08276-282127. ಸಂಕಷ್ಟಕ್ಕೀಡಾದ ಜಾನುವಾರುಗಳು ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಈ ಸಹಾಯವಾಣಿ ಸಂಖ್ಯೆಯನ್ನು (ಬೆಳಿಗ್ಗೆ 9 ರಿಂದ ಸಂಜೆ 6) ಸಂಪರ್ಕಿಸಲು ಕೋರಲಾಗಿದೆ. ಇತರ ಸಾಕು ಪ್ರಾಣಿಗಳು ಸಹ ಸಂಕಷ್ಟಕ್ಕೀಡಾಗಿದ್ದು ಅವುಗಳಿಗೆ ತುರ್ತು ಚಿಕಿತ್ಸೆ , ಆಹಾರ ಮತ್ತು ಸಂರಕ್ಷಣೆಗಾಗಿ ಸರ್ಕಾರವು ಕ್ರಮ ವಹಿಸಲಿದೆ. ಗೋಶಾಲೆಯನ್ನು ಪರಿಸ್ಥಿತಿ ಸುಧಾರಿಸುವ ತನಕ ಕೂಡಿಗೆ ಜರ್ಸಿ ತಳಿ ಸಂವರ್ಧನಾ ಕೇಂದ್ರದಲ್ಲಿ ನಿರ್ವಹಿಸಬೇಕಾಗಿರುವದರಿಂದ ಸಾರ್ವಜನಿಕರು/ದಾನಿಗಳು ಪಶು ಆಹಾರ, ಒಣ ಹುಲ್ಲು, ಹಸಿ ಹುಲ್ಲು, ಮತ್ತು ಶ್ವಾನ (ನಾಯಿ) ಆಹಾರಗಳನ್ನು ದೇಣಿಗೆಯಾಗಿ ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಜರ್ಸಿ ತಳಿ ಸಂವರ್ಧನಾ ಕೇಂದ್ರ ಕೂಡಿಗೆ ದೂರವಾಣಿ ಸಂಖ್ಯೆ 08276-278248, ಮೊಬೈಲ್ ಸಂಖ್ಯೆ 9901668895 ಅಥವಾ 9449562309 ಇವರನ್ನು ಸಂಪರ್ಕಿಸಿ ನೀಡಬಹುದಾಗಿದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಪ್ರಕಟಣೆ ತಿಳಿಸಿದೆ.