ಗೋಣಿಕೊಪ್ಪ ವರದಿ, ಆ. 31: ಮೈಸೂರು ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ವತಿಯಿಂದ ಕೊಡಗಿನ ಪ್ರವಾಹ ಸಂತ್ರಸ್ತರಿಗಾಗಿ ಉಚಿತ ವೈದ್ಯಕೀಯ ಶಿಬಿರ ಆರಂಭಗೊಂಡಿದೆ.
ಬಜೆಗುಂಡಿಯಲ್ಲಿ ಶಿಬಿರ ನಡೆಯುತ್ತಿದ್ದು, ಐದು ದಿನಗಳಿಗಿಂತ ಹೆಚ್ಚು ಕಾಲ ದಿನಕ್ಕೊಂದರಂತೆ ಕೃಷಿ ಕೂಲಿ ಕಾರ್ಮಿಕರಿರುವ ಸಂತ್ರಸ್ತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಶಿಬಿರದಲ್ಲಿ ದಾವಣಗೆರೆ ಹಾಗೂ ಮೈಸೂರು ವೈದ್ಯರು ಹಾಗೂ ತಜ್ಞರ ಸಮಿತಿಯಿದ್ದು ವೈದ್ಯರ ಸಮಿತಿಯ ನೇತೃತ್ವವನ್ನು ಡಾ. ವಸುಧೇಂದ್ರ ವಹಿಸಿದ್ದಾರೆ. ಎಸ್‍ಯುಸಿಐ ಪಕ್ಷದ ಸ್ವಯಂಸೇವಕರು ಪಾಲ್ಗೊಂಡಿದ್ದಾರೆ. ಎಸ್‍ಯುಸಿಐ (ಕಮ್ಯೂನಿಸ್ಟ್) ಪಕ್ಷದ ಮೈಸೂರು ಜಿಲ್ಲಾ ಕಾರ್ಯದರ್ಶಿ ಬಿ. ರವಿ ಉಸ್ತುವಾರಿ ವಹಿಸಿಕೊಂಡಿದ್ದಾರೆ.