ಸುಂಟಿಕೊಪ್ಪ,ಆ.31: ‘ನಮ್ಮ ಸುಂಟಿಕೊಪ್ಪ ಬಳಗ’ ಫೇಸ್ ಬುಕ್ ಗುಂಪಿನ ವತಿಯಿಂದ ಹೋಬಳಿ ವ್ಯಾಪ್ತಿಯ ನೆರೆ ಸಂತ್ರಸ್ತ ಆಯ್ದ ಕೆಲವು ಕುಟುಂಬಗಳಿಗೆ ಸ್ವ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಡೆನಿಸ್ ಡಿಸೋಜ ಮಾಹಿತಿ ನೀಡಿದರು.

ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಬಾರೀ ಮಳೆ, ಬರೆ ಕುಸಿತದ ಪರಿಣಾಮವಾಗಿ ಹಲವು ಕುಟುಂಬಗಳು ಬೀದಿಪಾಲಾಗಿವೆ. ಅವರ ಬದುಕು ದುಸ್ತರವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಫೇಸ್ ಬುಕ್ ಬಳಗವು ಪುನರ್ವಸತಿ ಯೋಜನೆಯಡಿಯಲ್ಲಿ ನೆರೆ ಸಂತ್ರಸ್ತ ಆಯ್ದ ಕೆಲವು ಕುಟುಂಬದ ಮಹಿಳೆಯರಿಗಾಗಿ ಸ್ವ ಉದ್ಯೋಗದ ಅವಕಾಶವನ್ನು ಕಲ್ಪಿಸಿಕೊಡುತ್ತೇವೆ. ಎಂದು ಡೆನಿಸ್ ಡಿಸೋಜ ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಗಾಗಿ 8880008040,9379775266 ಸಂಪರ್ಕಿಸುವಂತೆ ಕೋರಿದ್ದಾರೆ.