ಮಡಿಕೇರಿ, ಸೆ. 2: ಮಹಾವೀರ ಚಕ್ರ ಪುರಸ್ಕøತ ಸ್ಕ್ವಾಡ್ರನ್ ಲೀಡರ್ ದಿವಂಗತ ಅಜ್ಜಮಾಡ ದೇವಯ್ಯ ಅವರ ಪುಣ್ಯ ಸ್ಮರಣಾ ಕಾರ್ಯಕ್ರಮ ತಾ. 7ರಂದು ಮಡಿಕೇರಿಯ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ನಡೆಯಲಿದೆ ಎಂದು ಕೊಡವ ಮಕ್ಕಡ ಕೂಟದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಡವ ಮಕ್ಕಡ ಕೂಟ ಹಾಗೂ ಅಜ್ಜಮಾಡ ಕುಟುಂಬಸ್ಥರು ಅಂದು ಪೂರ್ವಾಹ್ನ 10.30ಕ್ಕೆ ಮಡಿಕೇರಿಯ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಸೇರಲಿದ್ದು, ಈ ಕಾರ್ಯಕ್ರಮಕ್ಕೆ ನಿವೃತ್ತ ಸೇನಾಧಿಕಾರಿಗಳು, ನಿವೃತ್ತ ಯೋಧರು, ದೇಶಾಭಿಮಾನಿಗಳು ಭಾಗವಹಿಸಲಿರುವರು. ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಸಾವು ನೋವು, ಆಸ್ತಿಪಾಸ್ತಿ ನಷ್ಟ ಸಂಭವಿಸಿದÀ ಹಿನ್ನೆಲೆ ಹೆಚ್ಚಿನ ಕಾರ್ಯಕ್ರಮವಿರುವದಿಲ್ಲವೆಂದು ತಿಳಿಸಿದ್ದಾರೆ.