ಕೂಡಿಗೆ, ಸೆ. 2: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಸಮೀಪದ ಸೀತಾ ಕಾಲೋನಿಯಲ್ಲಿ ವಾಸಿಸುತ್ತಿರುವ ಜೇನುಕುರುಬ ಕುಟುಂಬಗಳಿಗೆ ಅನೇಕ ವರ್ಷಗಳ ನಂತರ 25 ಮನೆಗಳು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮಂಜೂರಾಗಿವೆ. ಮನೆಗಳ ನಿರ್ಮಾಣದ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ತಂಡ ಸೀತಾ ಕಾಲೋನಿಯಲ್ಲಿ 25 ಮನೆಗಳ ನಿರ್ಮಾಣದ ಸ್ಥಳವನ್ನು ಪರಿಶೀಲಿಸಿದರು. ಅಂದಾಜು 2 ಲಕ್ಷ ರೂಗಳಲ್ಲಿ ಒಂದು ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಸಮಾಜ ಇಲಾಖೆಯ ವತಿಯಿಂದ ಮನೆಗಳ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ. ಕೂಡಿಗೆ ಗ್ರಾ.ಪಂ. ಸದಸ್ಯ ಹೆಚ್.ಎಸ್. ರವಿ, ಜಿಲ್ಲಾ ಗಿರಿಜನ ಸಮನ್ವಯಾಧಿಕಾರಿ ಶಿವಕುಮಾರ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಕೃಷ್ಣ ರೈ ಹಾಗೂ ಇಲಾಖೆಯ ಅಧಿಕಾರಿ ವರ್ಗ ಸ್ಥಳ ಪರಿಶೀಲನೆ ನಡೆಸಿದರು.