ಮಡಿಕೇರಿ, ಸೆ. 2: ಜಿಲ್ಲಾಮಟ್ಟದ ನೂತನ ಬ್ರಾಹ್ಮಣ ಸಂಘಗಳ ಒಕ್ಕೂಟ ರಚನೆಯಾಗಿದೆ. ಶನಿವಾರ ಇಲ್ಲಿನ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಆಶ್ರಯದಲ್ಲಿ ನಡೆದ ಸಭೆಯಲ್ಲಿ ನೂತನವಾಗಿ ರಚನೆಗೊಂಡ ಒಕ್ಕೂಟದ ಅಧ್ಯಕ್ಷರಾಗಿ ಎ. ಗೋಪಾಲಕೃಷ್ಣ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಬಿ.ಕೆ. ಅರುಣ್ ಕುಮಾರ್, ಉಪಾಧ್ಯಕ್ಷರುಗಳಾಗಿ ಎಸ್.ಆರ್. ಶ್ರೀನಿವಾಸ್ (ಸೋಮವಾರಪೇಟೆ), ಟಿ.ಎಸ್. ಕೃಷ್ಣಮೂರ್ತಿ (ವೀರಾಜಪೇಟೆ) ಹಾಗೂ ಖಜಾಂಚಿಯಾಗಿ ಕೆ.ಎಸ್. ರಾಜಶೇಖರ್ (ಕುಶಾಲನಗರ) ಆಯ್ಕೆಗೊಂಡು ಜಿಲ್ಲೆಯ ವಿವಿಧ ಕಡೆಗಳಲ್ಲಿನ ಬ್ರಾಹ್ಮಣ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಮತ್ತೊಬ್ಬರು ನಿಯೋಜಿತ ಪ್ರತಿನಿಧಿ ಜಿಲ್ಲಾ ಸಮಿತಿಯ ನಿರ್ದೇಶಕರುಗಳಾಗಿರುತ್ತಾರೆ.
ಮುಖ್ಯವಾಗಿ ಜಿಲ್ಲೆಯ ತ್ರಿಮತಸ್ತ ಬ್ರಾಹ್ಮಣ ಸಮುದಾಯದ ಯೋಗ ಕ್ಷೇಮ, ಅಭಿವೃದ್ಧಿ ಹಾಗೂ ಅವರ ಸಮಸ್ಯೆಗಳ ಬಗ್ಗೆ ಸ್ಪಂದಿಸುವ ದೃಷ್ಟಿಯಿಂದ ಈ ಒಕ್ಕೂಟ ರಚನೆ ಯಾಗಿರುವದಾಗಿ ಅಧ್ಯಕ್ಷ ಗೋಪಾಲಕೃಷ್ಣ ತಿಳಿಸಿದರು. ವೇದಿಕೆಯಲ್ಲಿ ಎಂ. ಈಶ್ವರ್ ಭಟ್, ರಾಂ ಮುಗೂರು ಉಸ್ಥಿತರಿದ್ದರು. ಅನೇಕರು ಸಲಹೆ, ಅಭಿಪ್ರಾಯಗಳನ್ನು ನೀಡಿದರು.