ಸೋಮವಾರಪೇಟೆ, ಸೆ. 2: ಸಮೀಪದ ಮಾದಾಪುರದ ಹೊಳೆಯಲ್ಲಿ ಇಂದು ಸಂಜೆ ಮಹಿಳೆಯೋರ್ವರ ಮೃತದೇಹ ಪತ್ತೆಯಾಗಿದೆ. ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದ ಜಂಬೂರು ಗ್ರಾಮ ನಿವಾಸಿ ಭಾಗ್ಯ (41) ಎಂಬವರ ಮೃತದೇಹವೆಂದು ಪತ್ತೆಹಚ್ಚಲಾಗಿದೆ.

ಜಂಬೂರು ನಿವಾಸಿ ಸೀನಪ್ಪ ಅವರ ಪತ್ನಿ ಭಾಗ್ಯ ಅವರು ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದರು. ಇಂದು ಸಂಜೆ ವೇಳೆಯಲ್ಲಿ ಮಾದಾಪುರದ ಮಠದ ಬಳಿ ಹರಿಯುವ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ. ಹೊಳೆ ಬದಿ ತೆರಳುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದಿರಬಹುದು ಎಂದು ಸಂಶಯಿಸಲಾಗಿದೆ.

ಸ್ಥಳಕ್ಕೆ ಮಾದಾಪುರ ಹೊರಠಾಣೆಯ ಎಎಸ್‍ಐ ಸುಂದರ್ ಸುವರ್ಣ, ಮುಖ್ಯಪೇದೆ ಉಮೇಶ್, ಗ್ರಾ.ಪಂ. ಸದಸ್ಯರಾದ ಮಜೀದ್, ಉಮೇಶ್ ಅವರುಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.