ಪಾಠದ ಹೊರೆ ಇಳಿಸಲು ಸುಜಲಾ ಕರೆ

ಮಡಿಕೇರಿ, ಸೆ. 2: ಪ್ರಕೃತಿ ವಿಕೋಪದಿಂದ ಶಾಲೆಗಳು ಸಾಕಷ್ಟು ದಿನ ಮುಚ್ಚಲ್ಪಟ್ಟು, ಪಠ್ಯ ಬೋಧನೆ ತಡವಾಗುತ್ತಿದೆ. ಈ ರಜೆಯನ್ನು ಅಕ್ಟೋಬರ್ ತಿಂಗಳಲ್ಲಿ ಭರಿಸುವದರಿಂದ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಹೆಚ್ಚುತ್ತದೆ. ಇದನ್ನು ತಡೆಯಲು ಈಗಿನಿಂದಲೇ ಪ್ರತಿ ಶನಿವಾರ ಪೂರ್ತಿ ದಿನ ತರಗತಿಗಳು ಆರಂಭಿಸುವಂತಾಗಲಿ ಎಂದು ಶನಿವಾರಸಂತೆ ಸುಪ್ರಜಾ ಗುರುಕುಲ ಸ್ಥಾಪಕಿ, ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ ಜಿಲ್ಲಾ ಅಧ್ಯಕ್ಷೆ ಸುಜಲಾ ದೇವಿ ಹೇಳಿದ್ದಾರೆ.

‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ ತಿಂಗಳಲ್ಲಿ ಎರಡನೇ ಸೆಮ್ ಆರಂಭವಾಗಬೇಕು. ಅದರೊಳಗೆ ಮೊದಲ ಸೆಮ್ ಮುಗಿಯದಿದ್ದರೆ ಒಟ್ಟಾರೆ ಗೊಂದಲ, ಒತ್ತಡ ಆರಂಭವಾಗುತ್ತದೆ. ಹಾಗಾಗಿ ಈ ತಿಂಗಳೊಳಗೆ ಮೊದಲ ಸೆಮ್ ಮುಗಿಸುವ ಅಗತ್ಯವಿದೆ ಎಂದಿದ್ದಾರೆ.