ಮಡಿಕೇರಿ, ಸೆ. 2: ಗಾಳಿಬೀಡು, ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಅಲ್ಲಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪ ಹಾನಿ ಬಗ್ಗೆ ಕಾಂಗ್ರೆಸ್ ಪ್ರಮುಖರು ಇಂದು ಖುದ್ದು ಭೇಟಿಯೊಂದಿಗೆ ಸಮೀಕ್ಷೆ ನಡೆಸಿದರು.
ಗ್ರಾಮೀಣ ಜನತೆಯನ್ನು ಭೇಟಿಯಾಗಿ ಮಾಹಿತಿ ಕಲೆ ಹಾಕಿದ ಪ್ರಮುಖರು, ಕಾಲೂರಿನವರೇ ಆಗಿರುವ ಶಾಸಕ ಕೆ.ಜಿ. ಬೋಪಯ್ಯ ಅವರೊಂದಿಗೂ ಸಮಾಲೋಚನೆ ನಡೆಸಿದರು. ಪ್ರಾಕೃತಿಕ ವಿಕೋಪಕ್ಕೆ ಒಳಗಾಗಿರುವ ಸಂತ್ರಸ್ತರಿಗೆ ರಾಜಕೀಯ ರಹಿತವಾಗಿ ಪರಿಹಾರ ಕಲ್ಪಿಸಲು ಪಕ್ಷವು ಕೈಜೋಡಿಸಲಿದೆ ಎಂದು ಶಾಸಕರೊಂದಿಗೆ ಅಭಿಪ್ರಾಯ ಹಂಚಿಕೊಂಡರು.
ಮಡಿಕೇರಿ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ರಜಾಕ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ರಮಾನಾಥ್, ನಗರಸಭಾ ಸದಸ್ಯ ಚುಮ್ಮಿದೇವಯ್ಯ, ರಾಜೀವ್ಗಾಂಧಿ ಗ್ರಾಮೀಣ ಯೋಜನಾ ಸಂಚಾಲಕ ತೆನ್ನಿರ ಮೈನಾ ಸೇರಿದಂತೆ ಇತರ ಕಾರ್ಯಕರ್ತರ ತಂಡ ಸಮೀಕ್ಷೆಯಲ್ಲಿ ಪಾಲ್ಗೊಂಡು ಗ್ರಾಮೀಣ ಜನತೆಯಲ್ಲಿ ಧೈರ್ಯ ತುಂಬಿದರು.