ಕೂಡಿಗೆ, ಸೆ. 2: ಕೂಡಿಗೆ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯ ಕ್ರೀಡಾ ಆವರಣದಲ್ಲಿ ಕುಶಾಲನಗರ ವಲಯ ಮಟ್ಟದ ಕ್ರೀಡಾಕೂಟ ನಡೆಯಿತು.
ಸಭಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ನೆರವೇರಿಸಿದರು. ನಂತರ ಮಾತನಾಡಿದ ಅವರು, ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕವಾಗಿ ಉತ್ತಮಗೊಳಿಸುತ್ತದೆ. ಅಲ್ಲದೆ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರಹಾಕಲು ಉತ್ತಮ ಅವಕಾಶವಿದೆ ಎಂದರು.
ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಕ್ರೀಡಾಜ್ಯೋತಿ ಬೆಳಗಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕ್ರೀಡಾ ಪ್ರತಿಭೆಯನ್ನು ಗುರುತಿಸುವದರ ಮೂಲಕ ಮುಂದಿನ ಶಿಕ್ಷಣದ ಬೆಳವಣಿಗೆಗೆ ಕ್ರೀಡೆಯು ಸಹಕಾರಿಯಾಗುವದು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಕುಮಾರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವೆಂಕಟೇಶ್, ಶಾಲಾಮುಖ್ಯೋಪಾಧ್ಯಾಯಿನಿ ಸ್ವಾತಿ, ವಿದ್ಯಾರ್ಥಿ ಮತ್ತು ಪೋಷಕರ ಪರಿಷತ್ತಿನ ಅಧ್ಯಕ್ಷ ಕೆ.ಟಿ. ವೆಂಕಟೇಶ್, ಕ್ರೀಡಾಕೂಟದ ಉಸ್ತುವಾರಿ ಸದಾಶಿವ ಎಸ್. ಪಲ್ಲೇದ್, ಶಾಲಾ ದೈಹಿಕ ಶಿಕ್ಷಕಿ ಸುಲೋಚನ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಬಿ.ಪಿ. ಅಪ್ಪಣ್ಣ ಸೇರಿದಂತೆ ದೈಹಿಕ ಶಿಕ್ಷಕರು ಇದ್ದರು.
ಕುಶಾಲನಗರ ಎ ವಲಯದ ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.