ಮಡಿಕೇರಿ, ಸೆ. 2: ಚಿಪ್ಪುಹಂದಿಯನ್ನು ಅಕ್ರಮ ಬೇಟೆಯಾಡಿ ಕೊಂದು ಮಾರಾಟಕ್ಕೆ ಯತ್ನಿಸಿದ್ದ ಆರೋಪಿಗಳಿಬ್ಬರನ್ನು ವೀರಾಜಪೇಟೆ ಅರಣ್ಯ ದಣ ಪೊಲೀಸರು ಪತ್ತೆಹಚ್ಚಿ ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದ್ದು, ಈ ಕೃತ್ಯದ ಹಿಂದೆ ವ್ಯವಸ್ಥಿತ ಜಾಲವೊಂದರ ಶಂಕೆ ವ್ಯಕ್ತಗೊಂಡಿದೆ.