ಮಡಿಕೇರಿ, ಸೆ. 2: ಹಟ್ಟಿಹೊಳೆ - ಮುಕ್ಕೋಡ್ಲು ಮಾರ್ಗದಲ್ಲಿ ಭೂಕುಸಿತದೊಂದಿಗೆ ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಗೀಡಾಗಿರುವ ಪ್ರದೇಶಗಳಿಗೆ ಇಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಂದಾಯ ಹಾಗೂ ಇತರ ಇಲಾಖೆಗಳ ತಂಡದೊಂದಿಗೆ, ಹಾನಿಗೀಡಾಗಿರುವ ರಸ್ತೆ, ವಿದ್ಯುತ್ ಸಮಸ್ಯೆ, ಸಾರ್ವಜನಿಕ ಆಸ್ತಿ-ಪಾಸ್ತಿಗಳ ವಿವರ ಕಲೆ ಹಾಕಿದ ಜಿಲ್ಲಾಧಿಕಾರಿಗಳು, ಸಂಕಷ್ಟಕ್ಕೊಳಗಾಗಿ ರುವ ಗ್ರಾಮೀಣ ಜನತೆಯ ಅಹವಾಲುಗಳನ್ನು ಆಲಿಸಿದರು.ಬಳಿಕ ಗಾಳಿಬೀಡು ಹಾಗೂ ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ದೇವಸ್ತೂರು ಮತ್ತಿತರ ಕಡೆಗಳಿಗೂ ಖುದ್ದು ತೆರಳಿ (ಮೊದಲ ಪುಟದಿಂದ) ಪರಿಸ್ಥಿತಿ ವೀಕ್ಷಿಸಿದ ಅವರು, ತ್ವರಿತಗತಿಯಲ್ಲಿ ಜನತೆಗೆ ರಸ್ತೆ, ವಿದ್ಯುತ್ನಂತಹ ಮೂಲ ಸೌಕರ್ಯಕ್ಕೆ ನಿರ್ದೇಶಿಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಜಿ.ಪಂ. ಮಾಜಿ ಅಧ್ಯಕ್ಷ ರವಿಕುಶಾಲಪ್ಪ, ಮತ್ತಿತರರು ಹಾಜರಿದ್ದು, ಪ್ರಾಕೃತಿಕ ವಿಕೋಪದಿಂದ ಎದುರಾಗಿರುವ ಮನಕಲಕುವ ಘಟನೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು.