ಸೋಮವಾರಪೇಟೆ,ಸೆ.2: ನಾಟಿ ಮಾಡಿದ್ದ ಗದ್ದೆಗೆ ಕಾಡಾನೆ ಧಾಳಿ ನಡೆಸಿ ಭತ್ತದ ಪೈರನ್ನು ನಷ್ಟಗೊಳಿಸಿರುವ ಘಟನೆ ಸಮೀಪದ ಗಣಗೂರು ಗ್ರಾಮದಲ್ಲಿ ನಡೆದಿದೆ.

ಗಣಗೂರು ಗ್ರಾಮದ ಜಿ.ಎಸ್. ಚಂದ್ರಶೇಖರ್, ಗೌರಮ್ಮ, ನಾಗೇಶ್, ರಾಜಶೇಖರ್, ಸುರೇಶ್ ಅವರುಗಳಿಗೆ ಸೇರಿದ ನಾಟಿ ಮಾಡಿದ್ದ ಗದ್ದೆಗೆ ನಿನ್ನೆ ರಾತ್ರಿ ನುಗ್ಗಿರುವ ಕಾಡಾನೆ, ಕೆಲವೆಡೆ ಪೈರನ್ನು ಕಿತ್ತೆಸೆದಿದೆ. ಗದ್ದೆಯಲ್ಲಿ ಮನಸೋಯಿಚ್ಛೆ ಸಂಚರಿಸಿರು ವದರಿಂದ ಭತ್ತದ ಪೈರುಗಳು ಹಾನಿಗೀಡಾಗಿವೆ.

ಕಳೆದೆರಡು ವಾರಗಳ ಹಿಂದಷ್ಟೇ ಬಾಣಾವರ-ಆಲೂರು ಸಿದ್ದಾಪುರ ರಸ್ತೆಯ ಆಲದಮರ ಎಂಬಲ್ಲಿ ವ್ಯಕ್ತಿಯೋರ್ವರ ಮೇಲೆ ಧಾಳಿ ನಡೆಸಿದ್ದ ಕಾಡಾನೆ ಈ ಭಾಗದಲ್ಲಿ ನಿರಂತರವಾಗಿ ಸಂಚರಿಸುತ್ತಿದ್ದು, ಜನವಸತಿ ಪ್ರದೇಶದಲ್ಲೇ ಬೀಡುಬಿಟ್ಟಿದೆ. ತಕ್ಷಣ ಅರಣ್ಯ ಇಲಾಖಾಧಿಕಾರಿಗಳು ಪುಂಡಾನೆ ಯನ್ನು ಬೇರೆಡೆ ಸಾಗಿಸಲು ಕ್ರಮ ಕೈಗೊಳ್ಳಬೇಕೆಂದು ಚಂದ್ರಶೇಖರ್ ಒತ್ತಾಯಿಸಿದ್ದಾರೆ.