ಮಡಿಕೇರಿ, ಸೆ. 2: ವೀರಾಜಪೇಟೆಯ ಖಾಸಗಿ ಬಸ್ ನಿಲ್ದಾಣ ಬಳಿ ಬೆಕ್ಕೆಸೊಡ್ಲೂರು ಗ್ರಾಮದ ಕೂಲಿ ಕಾರ್ಮಿಕ ಪಿ.ಎ. ಮಂಜು (45) ಎಂಬಾತ ನಿಶಾಮತ್ತನಾಗಿ, ಬಿದ್ದು ಸಾವಿಗೀಡಾಗಿರುವ ಘಟನೆ ಸಂಭವಿಸಿದೆ. ಕೈಲ್‍ಮುಹೂರ್ತ ಪ್ರಯುಕ್ತ ಸಂತೆಗೆ ಬಂದಿದ್ದ ಈತ ಆಕಸ್ಮಿಕ ಮೃತನಾಗಿರುವ ಬಗ್ಗೆ ವೀರಾಜಪೇಟೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.